ಮಿಸ್ ಜಪಾನ್ ಆದ ಪಶ್ಚಿಮ ಬಂಗಾಳದ ಮೊದಲ ಸಿಎಂ ಅವರ ಮರಿಮೊಮ್ಮಗಳು

Miss-Japan

ಕೋಲ್ಕತಾ, ಸೆ.7- ಪ್ರಿಯಾಂಕಾ ಯೊಶಿಕಾ ವಾ…22ರ ಹರೆಯದ ಈ ಸುಂದರಿ ಹಾಫ್ ಇಂಡಿಯನ್ ! ಇದೀಗ ಮಿಸ್ ಜಪಾನ್ ಆಗಿ ಕಿರೀಟ ಧರಿಸಿರುವ ಈಕೆಯ ಮೂಲ ಗೊತ್ತೇ…?
ಪಶ್ಚಿಮ ಬಂಗಾಳದ ಮೊತ್ತ ಮೊದಲ ಮುಖ್ಯಮಂತ್ರಿ ಪ್ರಪುಲ್ಲ ಚಂದ್ರ ಘೋಷ್ ಅವರ ಮರಿ ಮೊಮ್ಮಗಳು. ಕಳೆದ 36 ವರ್ಷಗಳ ಹಿಂದೆ ಈ ಸೌಂದರ್ಯ ರಾಶಿಯ ಅಪ್ಪ ಅರುಣ್ ಘೋಷ್ ಜಪಾನ್‍ಗೆ ವಲಸೆ ಹೋಗಿ ನೆಲೆಸಿದ್ದರು. ಅಲ್ಲಿನ ಶಾಲೆಯೊಂದರಲ್ಲಿ ಬೆಂಗಾಳಿ ಭಾಷೆ ಶಿಕ್ಷಕಿಯಾಗಿದ್ದ ನವೋಲಾ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿ ಮಗಳೇ ಪ್ರಿಯಾಂಕಾ ಯೋಶಿಕಾವಾ. ಪ್ರಿಯಾಂಕಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ನಾನು ಭಾರತೀಯಳು ಎಂದು.

ಇದೆ ಮೊದಲ ಬಾರಿಗೆ ಭಾರತೀಯ ಮೂಲದ ಯುವತಿಗೆ ಮಿಸ್ ಜಪಾನ್ ಪಟ್ಟ ಸಿಕ್ಕಿದೆ. ಜನಾಂಗೀಯ ಸಮಾನತೆ ಎಂಬ ತತ್ವವನ್ನ ಇಟ್ಟುಕೊಂಡು ಎಲಿಫಾಂಟ್ ಟ್ರೈನರ್ ಲೈಸನ್ಸ್ ಸಂಸ್ಥೆ ನಡೆಸಿದ ಮಿಸ್ ಜಪಾನ್ ಸ್ಪರ್ಧೆಯಲ್ಲಿ ಈ ಪಟ್ಟ ಸಿಕ್ಕಿದ್ದು, ಮಿಸ್ ಜಪಾನ್ ಆಗಿರುವುದಕ್ಕೆ ಪ್ರಿಯಾಂಕ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕ ತಂದೆ ಭಾರತೀಯ ಮೂಲದವರಾಗಿದ್ದು, ತಾಯಿ ಜಪಾನ್ ವಾಸಿಯಾಗಿದ್ದು, ಟೋಕಿಯೋದಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಮಿಸ್ ಜಪಾನ್ ಪಟ್ಟವನ್ನ ಜಪಾನ್ ಮೂಲದ ಯುವತಿಗೆ ಈ ಅವಾರ್ಡ್ ನೀಡಬೇಕಿತ್ತು ಅದನ್ನ ಬಿಟ್ಟ ಹಾಫ್ ಇಂಡಿಯನ್ ಯುವತಿಗೆ ಪ್ರಶಸ್ತಿ ಕೊಟ್ಟಿದ್ದೇಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಪಾನಿ ಭಾಷೆಯ haafu  (ಮಿಶ್ರ ಜನಾಂಗ) ಎಂಬ ಹ್ಯಾಷ್‍ಟ್ಯಾಗ್ ಬಳಸಿ ಚರ್ಚೆ ನಡೆಸುತ್ತಿದ್ದಾರೆ.

► Follow us on –  Facebook / Twitter  / Google+

Sri Raghav

Admin