ಮೀನುಗಾರನ ಶವ ಪತ್ತೆ
ಕೊಪ್ಪಳ,ಆ26- ತಾಲೂಕಿನ ಹುಲಗಿ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯಲು ಹೋದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಇಂದು ಪತ್ತೆಯಾಗಿದೆ. ದುರಗೆಪ್ಪ(45) ಮೃತ ವ್ಯಕ್ತಿಯಾಗಿದ್ದಾನೆ. ಇತನು ಗುರುವಾರದಂದು ಮೀನು ಹಿಡಿಯಲು ನದಿಗೆ ತೆರಳಿದ್ದ ನೀರಿನ ರಭಸದಲ್ಲಿ ಕೊಚ್ಚಿಹೋಗಿದ್ದ ಇಂದು ಬೆಳಗ್ಗೆ ಶವ ಪತ್ತೆಯಾಗಿದೆ.ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.