ಮುಂದಿನ ವರ್ಷ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ : ಡಾ.ಸುಬ್ರಮಣಿಯನ್ ಸ್ವಾಮಿ

Subhranhany-n-Swamy

ಡೆಹ್ರಾಡೂನ್, ಮೇ 15-ಮುಂದಿನ ವರ್ಷದ ವೇಳೆಗೆ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಬಿಜೆಪಿ ಧುರೀಣ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.   ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್‍ನಲ್ಲಿ ಸಂಘ ಪರಿವಾರದ ಅಂಗಸಂಸ್ಥೆ ವಿಶ್ವ ಸಂವಾದ ಕೇಂದ್ರ ಆಯೋಜಿಸಿದ್ದ ನಾರದಾ ಸನ್ಮಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‍ನಲ್ಲಿ ನಡೆಯುತ್ತಿರುವ ರಾಮಮಂದಿರ-ಬಾಬರಿ ಮಸೀದಿ ವಿವಾದದ ವಿಚಾರಣೆ ಈ ವರ್ಷ ನವೆಂಬರ್‍ನಲ್ಲಿ ಇತ್ಯರ್ಥಗೊಳ್ಳಲಿದ್ದು, ಮಂದಿರ ನಿರ್ಮಾಣ ಮಾರ್ಗವನ್ನು ಸುಗಮಗೊಳಿಸಲಿದೆ ಎಂದರು.ರಾಮಮಂದಿರವನ್ನು 2024ರ ಒಳಗೆ ನಿರ್ಮಿಸಲಾಗುವುದು ಎಂದು ಮಾರ್ಚ್‍ನಲ್ಲಿ ಹೇಳಿಕೆ ನೀಡಿದ್ದ ಡಾ. ಸ್ವಾಮಿ, ಈಗ 2018ರಲ್ಲೇ ಮಂದಿರ ರೂಪಗೊಳ್ಳಲಿದೆ ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin