ಮುಂದುವರೆದ ಪ್ರತಿಭಟನೆ : ಶಾಸಕರು ನಾಪತ್ತೆ
ಚನ್ನಪಟ್ಟಣ, ಸೆ.27- ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸದಿರುವಂತೆ ಒತ್ತಾಯಿಸಿ ಗಾಂಧಿ ಸ್ಮಾರಕ ಭವನದಲ್ಲಿ ಶಾಸಕ ಸಿ.ಪಿ.ಯೋಗೀಶ್ವರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟ ಪರಿಣಾಮ ಹೊಂಗನೂರು ಜಿಪಂ ವ್ಯಾಪ್ತಿಯ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪ್ರತಿಭಟನೆಯ ಆರಂಭದ ದಿನದಂದು ಕಾಣಿಸಿಕೊಂಡ ಶಾಸಕ ಯೋಗೀಶ್ವರ್ ಆನಂತರ ನಾಪತ್ತೆಯಾಗಿದ್ದು, ಬಹುಶಃ ಒಂದೇ ದಿನಕ್ಕೆ ಪ್ರತಿಭಟನೆ ಅವರಿಗೆ ಬೇಸರ ತಂದಿರಬಹುದೆಂದು ಜನಸಾಮಾನ್ಯರ ಅಭಿಪ್ರಾಯವಾಗಿದೆ.
ಎರಡನೇ ದಿನದಿಂದ ಜಿಲ್ಲಾ ಪಂಚಾಯಿತಿವಾರು ಪ್ರತಿಭಟನೆಯನ್ನು ರೂಪಿಸಿದ್ದು, ನಿನ್ನೆ ಹೊಂಗನೂರು ಜಿಪಂ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳು, ಮುಖಂಡರುಗಳು ಹಾಜರಿದ್ದರು.ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ವೀಣಾಕುಮಾರಿ, ತಾಪಂ ಅಧ್ಯಕ್ಷ ರಾಜಣ್ಣ,ಯುವ ಮುಖಂಡ ಚಂದ್ರುಸಾಗರ್, ಮಲವೇಗೌಡ, ಕುಳ್ಳಪ್ಪ, ಪ್ರಸನ್ನಕುಮಾರ್, ಶಿವರಾಜೇಗೌಡ, ಗ್ರಾಪಂ ಅಧ್ಯಕ್ಷರುಗಳಾದ ಪುಟ್ಟಸ್ವಾಮಿಗೌಡ, ಕಿರಣ್ಕುಮಾರ್, ಸುಧಾಚಂದ್ರು, ಲಕ್ಷ್ಮಿ ಬಸವಲಿಂಗಯ್ಯ, ಲಿಯಾಖಾತ್ ಆಲಿಖಾನ್ ಮುಂತಾದವರು ಭಾಗವಹಿಸಿದ್ದರು.
► Follow us on – Facebook / Twitter / Google+