ಮುಕ್ತಿ ಸೋಪಾನಕ್ಕೆ ಅರಿವೆ ಅಗತ್ಯವಲ್ಲ ಅರಿವು ಮುಖ್ಯ : ದಾನೇಶ್ವರ ಶ್ರೀ

Spread the love

6
ಬಂಡಿಗಣಿ,ಅ.5- ಸೋಪಾನವೇರಲು ನಾವು ಎಷ್ಟು ಬೆಲೆಬಾಳುವ ಅರಿವೆ ಹಾಕಿದ್ದೇವೆ ಎಂಬುದು ಮುಖ್ಯವಲ್ಲ, ಬದಲಾಗಿ ನಾವು ಈ ಲೋಕದಲ್ಲಿ ಯಾತಕ್ಕಾಗಿ ಜನಿಸಿದ್ದೇವೆ ಎಂಬ ಅರಿವು ಪಡೆದುಕೊಂಡರೆ ಸಾಕು ಪರಮಾತ್ಮನ ಸಾನಿಧ್ಯ ಮತ್ತು ಸಾಮಿಪ್ಯ ಹೊಂದಲು ಸುಲಭ ಸಾಧ್ಯವಿದೆ ಎಂದು ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ನುಡಿದರು.ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ಬಂಡಿಗಣಿಯಲ್ಲಿ ಶ್ರೀಗಳು ಮಾತನಾಡುತ್ತಾ, ಪಾರಲೌಖಿಕ ಸುಖದ ಪರಾಕಾಷ್ಠೆ ಹೊಂದಿದವರಿಗೆ ಲೌಖಿಕ ಸುಖದ ಅರಿವು ಉಂಟಾಗದು. ಜಗದ ಕಣ್ಣಿಗೆ ಅವರು ಹುಚ್ಚರಂತೆ ಕಂಡರೂ ಆಧ್ಯಾತ್ಮಿಕ ಲೋಕದ ಮಹಾಜ್ಞಾನಿಗಳಾಗಿರುತ್ತಾರೆ.

ನಿಂದೆ, ಅಪವಾದಗಳು ಎಷ್ಟೇ ಬಂದರೂ ಅವನ್ನೆಲ್ಲ ನಗುತ್ತ ಸಹಿಸಿಕೊಂಡು ಪಾರಮಾರ್ಥಿಕ ಸತ್ಯ ಸುಖದ ಪಥದತ್ತ ಧ್ಯಾನ-ದಾನ ಮಾರ್ಗದಲ್ಲಿ ಸಾಗಿ ಜೀವ ಪಾವನಗೊಳಿಸಬೇಕು. ಭಗವಂತನ ಅಂತಃಕರಣ ದೊರೆತಲ್ಲಿ ಮಾತ್ರ ಮಾನವ ಜೀವನ ಪಾವನ ವಾಗುತ್ತದೆ. ಆಸೆಗಳಿಲ್ಲದೆ ಭಕ್ತಿ ಮಾಡುವವರಿಗೆ ಭಗವಂತನ ಆಂತಃಕರಣ ದೊರೆಯುತ್ತದೆ. ನಿಷ್ಠೆಯಿಂದ ಮಾಡುವ ಭಕ್ತಿಗೆ ಗುರುವಿನ ರಕ್ಷಣೆ ದೊರೆಯು ತ್ತದೆ. ಓಂಕಾರ ಶಬ್ದದಲ್ಲಿ ಝೇಂಕಾರವಾಗಿದ್ದವನು ಮೂಲ ಪುರುಷ ಭಗವಂತ. ನಾಮ ಭಿನ್ನವಾಗಿದ್ದರೂ ಅಂತಿಮ ಶಕ್ತಿ ಮಾತ್ರ ಒಂದೆ. ದೇಶಕ್ಕಂಟಿರುವ ಭಯೋತ್ಪಾದಕರಂತೆ ನಮ್ಮ ಶರೀರಕ್ಕೂ ಅಷ್ಟ ಮದಗಳು ಆವರಿಸಿಕೊಂಡಿವೆ. ಅವುಗಳನ್ನು ಮೆಟ್ಟಿ ನಿಲ್ಲಲು ಪ್ರತಿ ಕ್ಷಣ ಧ್ಯಾನ-ದಾನಗಳನ್ನು ಮಾಡುತ್ತಿರಬೇಕು ಎಂದರು.

ಐಹಿಕ ದುರಾಸೆ ಮರೆತು ಸತ್ಯ, ಧರ್ಮದ ಮಾರ್ಗದಲ್ಲಿ ಮನಸ್ಸು ಸದಾ ಇರಬೇಕು. ದೇವರ ಅಂತಃಕರಣದ ಕಡಲಲ್ಲಿ ಆಡುವುದೇ ಆನಂದ. ನಂಬಿಗೆ ಸಂಬನ ಅರಮನೆ ಎಂಬಂತೆ, ನಂಬಿಗೆ ತುಂಬಿದ ತಂಬಿಗೆಯಂತೆ, ನಂಬಿಗೆಯಿದ್ದರೆ ಏನೆಲ್ಲ ಸಾಧಿಸಬಹುದು. ಸುಗುಣದಲ್ಲಿ ಸಂಪಾದನೆ ಮಾಡಿದ ಆಸ್ತಿ ಅಂತಸ್ತಿನಲ್ಲಿ ಸ್ವಲ್ಪ ಮಟ್ಟಿಗಾದರೂ ದಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕು. ಕಪ್ಪಡಿ ಸಂಗಮನಾಥನ ದಯೇದಿಂದ 12ನೇ ಶತಮಾನದ ಜೀವಾತ್ಮದ ಕಲಿಯುಗದ 21ನೇ ಶತಮಾನದಲ್ಲಿ ಬಂಡಿಗಣಿಯ ಮಠದ ಅನುಭವ ಮಂಟಪದಲ್ಲಿ ಬಾಗಿಯಾಗುವ ಕಾಲ ಸಂಭವಿಸಿದೆ. ಜಗಳ, ಅನ್ಯಾಯದಂತಹ ಕೆಲಸಗಳಿಗೆ ಅವಕಾಶ ಕೊಡದೆ ದಾನ ಧರ್ಮದಂತಹ ಕೆಲಸಗಳನ್ನು ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಿ ಎಂದು ಹೇಳಿದರು.
ಮಾತೋಶ್ರೀ ಸುಮಂಗಲಾತಾಯಿ ಪಾಟೀಲ ಚೀಟಿ-ತಾಯತ, ಮಂತ್ರ-ಮಾಟಗಳಿಂದ ಯಾರಿಗೂ ಸುಖವಿಲ್ಲ. ಮೌಢ್ಯತೆಗಳನ್ನು ದೂರಗೊಳಿಸಿ ಧರ್ಮವನ್ನು ಪರಿಪಾಲಿಸಿದರೆ ಮತ್ತು ಧ್ಯಾನ-ದಾನದ ಮಾರ್ಗ ಹಿಡಿದರೆ ಇಂಥ ಅನಿಷ್ಟಗಳು ಏನೂ ಮಾಡಲಾರವು. ಧರ್ಮಿಯನ್ನು ಧರ್ಮವೇ ಸಂರಕ್ಷಿಸುತ್ತದೆ. ಚೀಟಿ-ತಾಯತ ಮಾಡುವವರು ರಾಕ್ಷಸ ಸಂತಾನಗಳು. ದೈವತ್ವದ ಬಲವನ್ನು ನಂಬಿ ಅಂಥ ಅನಿಷ್ಟ ನಂಬಿಕೆಗಳನ್ನು ದೂರವಿಡಿ ಎಂದರು.ಶಿವಾನಂದ ಮಹಾಬಳಶೆಟ್ಟಿ ಮಾತನಾಡಿ 12ನೇ ಶತಮಾನದಲ್ಲಿ ಅಲ್ಲಮಪ್ರಭು ದೇವರ ಅಧ್ಯಕ್ಷತೆಯಲ್ಲಿ ಕಲ್ಯಾಣದಲ್ಲಿ ಅನುಭವ ನಡೆಯುತ್ತಿತ್ತು. ಕಲಿಯುಗದ 21ನೇ ಶತಮಾನದಲ್ಲಿ ದಾನೇಶ್ವರ ಶ್ರೀಗಳ ಅಧ್ಯಕ್ಷತೆಯಲ್ಲಿ ಅನುಭವ ನಡೆಯುತ್ತದೆ ಎಂದರು. ಪ್ರಕೃತಿ ಪುರುಷರು ಸದಾವಕಾಲ ಭೂಮಿಯ ಮೇಲೆ ಇದ್ದೆ ಇರುತ್ತಾರೆ ಎಂದು ನುಡಿದರು.ಕಸ್ತೂರಿ ಬನಹಟ್ಟಿ, ರುದ್ರಮುನಿ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಯಾದವಾಡದ ಸಿದ್ದಪ್ಪ ಸಂತರು, ಮಹಾಲಿಂಗಪ್ಪ ಆದೆಪ್ಪನವರ, ದುಂಡಪ್ಪ ಬಡಿಗೇರ, ಶಿವಕುಮಾರ ಮಠದ, ಮುರಿಗೆಪ್ಪ ಮಾಲಗಾರ, ಸಂಗಮೇಶ ಹಾಲಳ್ಳಿ ಮುಂತಾದವರಿದ್ದರು.

 

► Follow us on –  Facebook / Twitter  / Google+

Sri Raghav

Admin