ಮುಗಿದ ಸರಣಿ ರಜೆಗಳು : ಬೆಂಗಳೂರಲ್ಲಿ ಮತ್ತೆ ಟ್ರಾಫಿಕ್ ಜಾಮ್

Bengaluru---0ಬೆಂಗಳೂರು, ನ.2-ಕಳೆದ ವಾರದಿಂದ ನಿರಂತರವಾಗಿ ಇದ್ದ ಸರಣಿ ರಜಾ ಮುಗಿಯುತ್ತಿದ್ದಂತೆ ಇಂದು ಶಾಲಾ, ಕಾಲೇಜು, ಕಚೇರಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಸಂಚಾರ ದಟ್ಟಣೆಯಿಂದ ಜನ ಪರದಾಡುವಂತಾಯಿತು. ದೀಪಾವಳಿ ಸೇರಿದಂತೆ ಇತರೆ ರಜೆಗಳು ಒಟ್ಟೊಟ್ಟಿಗೆ ಬಂದಿದ್ದರಿಂದ ಕಳೆದ 29 ರಿಂದ ನ.1 ರವರೆಗೆ ಇದ್ದ ಸರ್ಕಾರಿ ರಜೆಯಿಂದಾಗಿ ಊರುಗಳಿಗೆ ತೆರಳಿದ್ದವರು ಇಂದು ಬೆಳಗ್ಗೆ ನಗರಕ್ಕೆ ವಾಪಾಸ್ಸಾಗುತ್ತಿದ್ದುದು ಒಂದು ಕಡೆಯಾದರೆ, ಇಂದಿನಿಂದ ಶಾಲಾ ಕಾಲೇಜುಗಳು ಆರಂಭವಾಗಿದ್ದರಿಂದ ಎಲ್ಲಾ ಮಾರ್ಗಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು.

ಹೀಗಾಗಿ ಬೆಳಿಗ್ಗೆ ಏಕಾಏಕಿ ಹೆಚ್ಚಾದ ಜನಸಂದಣಿ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದಲ್ಲೂ ಬದಲಾವಣೆ ಮಾಡಿಕೊಂಡು ಐದು ನಿಮಿಷಕ್ಕೊಂದರಂತೆ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಸಾಮಾನ್ಯ ದಿನಗಳಲ್ಲಿ 7 ನಿಮಿಷಕ್ಕೊಂದರಂತೆ ರೈಲು ಸಂಚಾರವಿರುತ್ತದೆ. ಆದರೆ ಇಂದು ಜನರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದ್ದು, ಬೈಯ್ಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದಲ್ಲಿ ಹೆಚ್ಚಿನ ರೈಲು ಸಂಚಾರಕ್ಕೆ ಮಾಡಿಕೊಡಲಾಯಿತು. ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4 ಹಾಗೂ 48ರಲ್ಲಿ ಇಂದು ಬೆಳಗ್ಗೆಯಿಂದಲೇ ಟ್ರ್ಯಾಫಿಕ್ ಜಾಮ್‍ನಿಂದ ವಾಹನ ಸವಾರರು ತೊಂದರೆಗೆ ಸಿಲುಕುವಂತಾಯಿತು.

ಸಾಲು ಸಾಲು ರಜೆ ಕಳೆದು ಇಂದು ತಮ್ಮ ಕರ್ತವ್ಯಗಳಿಗೆ ತೆರಳಲು ಬಂದ ಜನರಿಗೆ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ತೊಂದರೆ ಎದುರಾಯಿತು. ಕಿಲೋ ಮೀಟರ್‍ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

► Follow us on –  Facebook / Twitter  / Google+

Sri Raghav

Admin