‘ಮುಗ್ಗರಿಸಿದ’ ಮುಖ್ಯಮಂತ್ರಿ ಸಿದ್ದರಾಮಯ್ಯ (Video)

Spread the love

Siddaramaiah

ಬೆಂಗಳೂರು, ಮೇ 24-ಮೆಟ್ಟಿಲು ಹತ್ತುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯತಪ್ಪಿ ಎಡವಿದ ಪ್ರಸಂಗ ನಡೆಯಿತು. ಜಿಲ್ಲಾ ಮಟ್ಟದ ಮುಖಂಡರ ಮೂರನೇ ದಿನದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಆಗಮಿಸಿದ ವೇಳೆ ಆತುರದಲ್ಲಿ ಕಚೇರಿಯ ಮೆಟ್ಟಿಲು ಹತ್ತುವಾಗ ತಮ್ಮ ತವರು ಜಿಲ್ಲೆಯ ಮುಖಂಡರತ್ತ ಕಣ್ಣಾಡಿಸುತ್ತಾ ಹೆಜ್ಜೆ ಹಾಕುವಾಗ ಪಂಚೆ ಕಾಲಿಗೆ ಸಿಲುಕಿ ಆಯತಪ್ಪಿದರು.  ತಕ್ಷಣ ಸನಿಹದಲ್ಲೇ ಇದ್ದ ಸಚಿವ ರೋಷನ್‍ಬೇಗ್ ಅವರು ಬೀಳದಂತೆ ಹಿಡಿದರು. ಸಾವರಿಸಿಕೊಂಡ ಮುಖ್ಯಮಂತ್ರಿಗಳು ಸಾವಧಾನವಾಗಿ ಒಳಗೆ ಹೆಜ್ಜೆ ಹಾಕಿದರು.
ಮುಂದುವರೆದ ಸಭೆ:
ಇಂದು ಮೈಸೂರು ಜಿಲ್ಲೆಯ ಕಂದಾಯ ವಿಭಾಗದ ಜಿಲ್ಲೆಗಳಾದ ಚಾಮರಾಜನಗರ, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರು, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರ ಜೊತೆ ನಡೆದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಕಾರ್ಯದರ್ಶಿ ವಿಷ್ಣುನಾದ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin