ಮುಲಾಯಂ-325, ಅಖಿಲೇಶ್-235, ಶಿವಪಾಲ್-78 ಅಭ್ಯರ್ಥಿಗಳ ಪಟ್ಟಿ : ವಿಭಜನೆಯತ್ತ ಸಮಾಜವಾದಿ ಪಕ್ಷ

Spread the love

Mulayam--01

ಲಕ್ನೋ, ಡಿ.30– ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂಸಿಂಗ್‍ಯಾದವ್-325, ಮುಖ್ಯಮಂತ್ರಿ ಅಖಿಲೇಶ್‍ಯಾದವ್-235 ಹಾಗೂ ಮುಲಾಯಂ ಸಹೋದರ ಶಿವಪಾಲ್‍ಯಾದವ್-78 ಇವು ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಎಸ್‍ಪಿಯಲ್ಲಿ ಭುಗಿಲೆದ್ದಿರುವ ಭಿನ್ನಾಭಿಪ್ರಾಯಗಳಿಗೆ ಸಾಕ್ಷಿಯಾಗಿರುವ ಕಾರಣವಾಗಿರುವ ಅಭ್ಯರ್ಥಿಗಳ ಪಟ್ಟಿ….!  ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಸಂಬಂಧ ಸಮಾಜವಾದಿ ಪಕ್ಷದಲ್ಲಿ ಕಾಣಿಸಿಕೊಂಡ ಭಿನ್ನಮತ ಇಂದು ಮತ್ತಷ್ಟು ತೀವ್ರಗೊಂಡಿದ್ದು, ಪಕ್ಷ ವಿಭಜನೆಯತ್ತ ಸಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಮುಲಾಯಂಸಿಂಗ್ ಯಾದವ್ ಬುಧವಾರ 325 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದರು. ಅವರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರ ಪುತ್ರ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟಿಕೆಟ್ ವಂಚಿತ ತಮ್ಮ 235 ಆಪ್ತರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಇದೇ ವೇಳೆ ಪಕ್ಷದ ಮತ್ತೊಬ್ಬ ಪ್ರಮುಖ ನಾಯಕ ಮತ್ತು ಮುಲಾಯಂ ಸಹೋದರ ಶಿವಪಾಲ್‍ಯಾದವ್ ತಮ್ಮ ಆಪ್ತರ 78 ಪಟ್ಟಿಯನ್ನು ಸಹ ನಿನ್ನೆ ತಡರಾತ್ರಿ ಬಿಡುಗಡೆ ಮಾಡಿದ್ದು, ಬಿಕ್ಕಟ್ಟಿನಲ್ಲಿ ಹೊಸ ಕಗ್ಗಂಟಿಗೆ ಕಾರಣವಾಗಿದೆ. ಕುಟುಂಬದಲ್ಲೇ ಭುಗಿಲೆದ್ದಿರುವ ಆಯ್ಕೆ ಗೊಂದಲದಿಂದಾಗಿ ಯಾದವೀ ಕಲಹ ಉಲ್ಬಣಗೊಂಡಿದ್ದು, ಚುನಾವಣೆಗೂ ಮುನ್ನವೇ ಭಿನ್ನಮತ ಸ್ಫೋಟಗೊಂಡಿದೆ.  ಈ ಭಿನ್ನಾಭಿಪ್ರಾಯಗಳು ಮೂರು ಬಣಗಳ ಸೃಷ್ಟಿಗೆ ಕಾರಣವಾಗಲಿದ್ದು, ಪಕ್ಷವು ಹೋಳಾಗುವ ಹಂತದತ್ತ ಸಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin