ಮುಷ್ಕರ ಕೈಬಿಟ್ಟ ಪೆಟ್ರೋಲಿಯಂ ವಿತರಕರು : ಪೆಟ್ರೋಲ್, ಡೀಸೆಲ್ ಗೆ ನೋ ಪ್ರಾಬ್ಲಂ

Spread the love

Petrol

ಬೆಂಗಳೂರು ನ.04 : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪೆಟ್ರೋಲಿಯಂ ವಿತರಕರು ಕೈಗೊಂಡಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. ಇಂದು ಮುಂಬೈನಲ್ಲಿ ನಡೆದ ಸಭೆಯ ತೀರ್ಮಾನದಂತೆ, ಪೆಟ್ರೋಲಿಯಂ ವಿತರಕರು ಮುಷ್ಕರ ಸ್ಥಗಿತಗೊಳಿಸಲು ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಸಭೆಯಲ್ಲಿ ಲೀಟರ್ ಪೆಟ್ರೋಲ್ 13.8 ಪೈಸೆ. ಹಾಗೂ ಪ್ರತಿ ಲೀ. ಡೀಸೆಲ್ ಗೆ 10 ಪೈಸೆ ಕಮಿಷನ್ ಹೆಚ್ಚಳ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಪ್ರತಿ ಆರು ತಿಂಗಳಿಗೊಮ್ಮೆ ಕಮಿಷನ್ ದರದಲ್ಲಿ ಪರಿಷ್ಕರಣೆ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಗಿದೆ.

ಪೆಟ್ರೊಲಿಯಂ ಡೀಲರ್ಸ್ ಸಂಘವು ಬೇಡಿಕೆ ಈಡೇರಿಕೆಗಾಗಿ ಕೇವಲ ಒಂದು ಪಾಳಿಯಲ್ಲಿ ಕೆಲಸ ಮಾಡಲು ಮತ್ತು ಭಾನುವಾರ ಮತ್ತು ರಜಾದಿನಗಳಲ್ಲಿ ಪೆಟ್ರೋಲ್ ಮಾರಾಟ ನಿಲ್ಲಿಸಲು ನಿರ್ಧರಿಸಿದ್ದವು. ದೇಶಾದ್ಯಂತ ನವೆಂಬರ್ 3 ಮತ್ತು 4 ರಂದು ತೈಲ ಕಂಪನಿಗಳಿಂದ ಪೆಟ್ರೋಲ್, ಡೀಸೆಲ್ ಖರೀದಿಸದೇ ಡೀಲರ್ ಗಳು ಮುಷ್ಕರ ನಡೆಸಿದ್ದರು. ಅಪೂರ್ವಚಂದ್ರ ವರದಿ ಜಾರಿಗಾಗಿ ಆಗ್ರಹಿಸಿ ಮತ್ತು ಕಮಿಷನ್ ಹೆಚ್ಚಳ, ಅಧಿಕಾರಿಗಳ ಕಿರುಕುಳ ತಡೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೆಟ್ರೋಲಿಯಂ ಡೀಲರ್ಸ್ ಗಳು ಕರೆ ನೀಡಿದ್ದರು.

ಪೆಟ್ರೋಲಿಯಂ ಡೀಲರ್’ಗಳು ಕರೆಕೊಟ್ಟ ಮುಷ್ಕರದ ಹಿನ್ನೆಲೆಯಲ್ಲಿ ಬಂಕ್ ಗಳನ್ನು ಬಂದ್ ಮಾಡಿರಲಿಲ್ಲವಾದರೂ, ಕಂಪನಿಗಳಿಂದ ಖರೀದಿ ನಿಲ್ಲಿಸಿದ್ದರಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಅನೇಕ ಬಂಕ್ ಗಳಲ್ಲಿ ಇಂಧನ ಖಾಲಿಯಾಗಿ ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿತ್ತು. ಡೀಲರ್ ಗಳು ಖರೀದಿ ಮಾತ್ರ ನಿಲ್ಲಿಸಿ, ಬಂಕ್ ನಡೆಸಿದ್ದರಾದರೂ, ಹೆಚ್ಚಿನ ಸಂಖ್ಯೆಯ ಗ್ರಾಹಕರು ಟ್ಯಾಂಕ್ ಫುಲ್ ಮಾಡಿಸಿಕೊಂಡ ಕಾರಣ, ಬಂಕ್ ಗಳಲ್ಲಿ ಬೇಗನೆ ಇಂಧನ ಖಾಲಿಯಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin