ಮೂರು ದಿನದ ಮಗುವನ್ನು ದೇವಸ್ಥಾನದಲ್ಲಿ ಬಿಟ್ಟುಹೋದ ಮಹಾತಾಯಿ

Baby--01

ಬೆಳಗಾವಿ, ಮೇ 14– ಇಂದು ತಾಯಂದಿರ ದಿನಾಚರಣೆ. ಎಲ್ಲೆಡೆ ಮಾತೆಯರನ್ನು ಸ್ಮರಿಸುವ ದಿನ. ಮಾತೃತ್ವದ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಆದರೆ ಇಲ್ಲೊಂದು ದುರಂತ ಸಂಭವಿಸಿದೆ. ಮೂರು ದಿನಗಳ ಹೆಣ್ಣು ಮಗುವನ್ನು ಈ ಮಹಾತಾಯಿ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾರೆ.  ಅದ್ಯಾವ ನೋವೋ… ಅದೇನು ಕಷ್ಟವೋ… ಗೊತ್ತಿಲ್ಲ. ಅಥವಾ ಹೆಣ್ಣು ಮಗು ಎಂಬ ತಾತ್ಸಾರವೋ ತಿಳಿದಿಲ್ಲ. ಆದರೂ ಈ ತಾಯಿ ಯಾರಾದರೂ ಮಗುವನ್ನು ಆರೈಕೆ ಮಾಡಲೆಂದು ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾರೆ.ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕಂಕನಾಡಿ ಗ್ರಾಮದಲ್ಲಿ. ದೇವಸ್ಥಾನದಲ್ಲಿ ಅಳುತ್ತಿರುವ ಮಗುವನ್ನು ಕಂಡು ಸ್ಥಳೀಯರು ಮಗುವಿನ ರಕ್ಷಣೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ.  ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಗುವನ್ನು ಆರೈಕೆ ಮಾಡಲು ತಾಲೂಕು ಆಸ್ಪತ್ರೆಗೂ ನೀಡಿದ್ದಾರೆ. ಮಗುವಿನ ತಾಯಿಗಾಗಿ ಶೋಧ ನಡೆಸಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಸದ ತೊಟ್ಟಿಯಲ್ಲಿ ನವಜಾತ ಶಿಶು : 

ಬಾಗಲಕೋಟೆ, ಮೇ 14- ರಸ್ತೆ ಬದಿಯ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಬಾಗಲಕೋಟೆ ನಗರದ ವಾಸವಿ ಥಿಯೇಟರ್ ಬಳಿಯಿರುವ ಐಡಿಬಿಐ ಬ್ಯಾಂಕ್ ಎದುರಿನ ಕಸದ ತೊಟ್ಟಿಯಲ್ಲಿ ಶವ ಪತ್ತೆಯಾಗಿದೆ. ಶವ ಕಸದ ತೊಟ್ಟಿಯಲ್ಲಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಟ್ಟಿನ ಬಾಕ್ಸ್‍ನಲ್ಲಿ ಮಲಗಿದ ಸ್ಥಿತಿಯಲ್ಲಿರುವ ಗಂಡು ಶಿಶುವಿನ ಶವಕ್ಕೆ ಇರುವೆಗಳು ಮೆತ್ತಿಕೊಂಡಿವೆ. ಸ್ಥಳಕ್ಕೆ ಬಾಗಲಕೋಟೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin