ಮೆಟ್ರೋ ವಿಸ್ತರಣೆ, ಸಂಚಾರ ದಟ್ಟಣೆ ತಗ್ಗಿಸಲು ಉಪನಗರ ರೈಲ್ವೆ

Metro--01

ಬೆಂಗಳೂರು, ಮಾ.15- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ವಿಸ್ತರಣೆ, ಸಂಚಾರ ದಟ್ಟಣೆ ತಗ್ಗಿಸಲು ಉಪನಗರ ರೈಲ್ವೆ ಯೋಜನೆ , ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ಎ ಅಡಿಯಲ್ಲಿ ಸಿಲ್ಕ್‍ಬೋರ್ಡ್‍ನಿಂದ ಕೆ.ಆರ್.ಪುರಂ ವೃತ್ತದವರೆಗೂ ಹೆಚ್ಚುವರಿ ಮಾರ್ಗ ನಿರ್ಮಾಣಕ್ಕೆ 4,200 ಕೋಟಿ ರೂ.ಗಳನ್ನು ಈ ಬಾರಿಯ ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ.  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೂಕ್ತ ಸಂಪರ್ಕ ಕಲ್ಪಿಸುವ ಮೆಟ್ರೋ ಹಂತ-3ರ ಅಧ್ಯಯನ ವರದಿ ಪೂರ್ಣಗೊಂಡಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ಭಾರತೀಯ ರೈಲ್ವೆ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು 345 ಕೋಟಿ ರೂ. ವೆಚ್ಚದಲ್ಲಿ ಉಪನಗರ ರೈಲ್ವೆ ಯೋಜನೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಉದ್ದೇಶದಿಂದ ಮೈಸೂರಿನ ಮಾದರಿಯಲ್ಲೇ ನಗರದ ಆಯ್ದ ಕ್ಲಸ್ಟರ್‍ಗಳಲ್ಲಿ ಬಾಡಿಗೆ ಸೈಕಲ್ ಯೋಜನೆ ಆರಂಭಿಸಲಾಗುವುದು. ಒಟ್ಟಾರೆ ಮೆಟ್ರೋ ಯೋಜನೆಯ ಒಂದನೆ ಹಂತದ ಕಾಮಗಾರಿಯನ್ನು ಏಪ್ರಿಲ್ 2017ರ ವೇಳೆಗೆ ಪೂರ್ಣಗೊಳಿಸಲಾಗುವುದು. 26,405 ಕೋಟಿ ವೆಚ್ಚದ ಎರಡನೆ ಹಂತದ ಯೋಜನೆಯಡಿ ಪುಟ್ಟೇನಹಳ್ಳಿಯಿಂದ ಅಂಜನಾಪುರ, ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ಮೆಟ್ರೋ ಯೋಜನೆಯನ್ನು ವಿಸ್ತರಿಸಲಾಗುವುದು.

[ ರಾಜ್ಯ ಬಜೆಟ್ 2017-18  (Live Updates) ]


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin