ಮೆಡಿಟರೇನಿಯನ್ ಸಮುದ್ರ ಪಾಲಾಗುತ್ತಿದ್ದ 480 ವಲಸಿಗರ ಜನರ ರಕ್ಷಣೆ

Spread the love

4-Day-Baby

ರೋಮ್, ಏ.3-ಮೆಡಿಟರೇನಿಯನ್ ಸಮುದ್ರದ ಮಧ್ಯಭಾಗದಲ್ಲಿ ಮಾನವೀಯ ಸೇನಾ ಸಂಘಟನೆಗಳ ನೌಕೆಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ನಾಲ್ಕು ದಿನಗಳ ಶಿಶುವೊಂದು ಸೇರಿದಂತೆ 480 ಜನರನ್ನು ರಕ್ಷಿಸಲಾಗಿದೆ. ಆಫ್ರಿಕಾ, ಶ್ರೀಲಂಕಾ ಮತ್ತು ಯೆಮೆನ್ ದೇಶಗಳ 200ಕ್ಕೂ ಹೆಚ್ಚು ವಲಸಿಗರನ್ನು ಸಾಗಿಸುತ್ತಿದ್ದ ಎರಡು ರಬ್ಬರ್ ದೋಣಿಗಳು, ಲಿಬಿಯಾ ಪಟ್ಟಣದ ಸಬ್ರತಾದಿಂದ ಸುಮಾರು 22 ನಾಟಿಕಲ್ ಮೈಲಿ ದೂರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿತ್ತು.

ಇದೇ ವೇಳೆ, ಸ್ಪೇನ್‍ನ ಸರ್ಕಾರೇತರ ಸಂಸ್ಥೆ ಪ್ರೋಆಕ್ಟಿವಾ ಓಪನ್ ಆಮ್ರ್ಸ್ ರಕ್ಷಣೆಗೆ ಧಾವಿಸಿತು. ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ನಂತರ ನಾಲ್ಕು ದಿನಗಳ ಹಸುಳೆ ಸೇರಿದಂತೆ ವಲಸಿಗರನ್ನು ಇನ್ನೊಂದು ನೌಕೆಗೆ ಸ್ಥಳಾಂತರಿಲಾಯಿತು. ಇನ್ನೊಂದು ಘಟನೆಯಲ್ಲಿ, ಎರಡು ರಬ್ಬರ್ ದೋಣಿಗಳಲ್ಲಿ ಪ್ರಯಾಣಿಸುತ್ತಿದ್ದ ವಲಸಿಗರನ್ನು ವೋಸ್ ಪ್ರೊಡೆನ್ಸ್ ಹಡಗಿನ ಸಿಬ್ಬಂದಿ ರಕ್ಷಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin