ಮೇಕೆ ನುಂಗಲು ಬಂದಿದ್ದ ಹೆಬ್ಬಾವನ್ನು ಕಲ್ಲಿನಿಂದ ಹೊಡೆದು ಕೊಂದ ಗ್ರಾಮಸ್ಥರು

Spread the love

snake

ಬಳ್ಳಾರಿ, ಅ.15- ಮೇಕೆ ನುಂಗಲು ಸಾಧ್ಯವಾಗದೆ ಹೆಬ್ಬಾವು ಸಾವನ್ನಪ್ಪಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಪೋತಲಗಟ್ಟಿ ಗ್ರಾಮದಲ್ಲಿ ನಡೆದಿದೆ. ಹೆಬ್ಬಾವೊಂದು ಏಕಾಏಕಿ ಗ್ರಾಮದಲ್ಲಿ ಕಾಣಿಸಿಕೊಂಡು ಮೇಕೆಯೊಂದನ್ನು ಹಿಡಿದುಕೊಂಡು ನುಂಗುತ್ತಿದ್ದು, ಇದನ್ನು ಕಂಡ ಜನರು ಗಾಬರಿಕೊಂಡಿದ್ದರು.   ವಿಷಯ ತಿಳಿಯುತ್ತಿದ್ದಂತೆ ತಂಡೋಪತಂಡವಾಗಿ ಸ್ಥಳಕ್ಕೆ ದೌಡಾಯಿಸಿದ ಗುಂಪು ಕಲ್ಲು ಹೊಡೆದು ಮೇಕೆಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೂ ಅರ್ಧ ನುಂಗಿದ್ದ ಹೆಬ್ಬಾವು ಗಾಯಗೊಂಡು ಉಸಿರುಗಟ್ಟಿ ಸಾವನ್ನಪ್ಪಿದೆ. ಮೇಕೆ ಕೂಡ ಸತ್ತು ಹೋಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin