ಮೇಟಿ ಸೆಕ್ಸ್ ಸ್ಕ್ಯಾಂಡಲ್ ಪಕ್ಕಾ ಪ್ಲಾನ್ಡ್ ಬ್ಲಾಕ್ ಮೇಲ್..!

Meti-Sex-Scandal
ಬೆಂಗಳೂರು, ಡಿ.19- ಮಾಜಿ ಸಚಿವ ಎಚ್.ವೈ.ಮೇಟಿಯವರ ರಾಸಲೀಲೆ ಪ್ರಕರಣ ಪಕ್ಕಾ ಬ್ಲಾಕ್‍ಮೇಲ್ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇದೊಂದು ಹನಿಟ್ರ್ಯಾಪ್ ಮಾದರಿ ಪ್ರಕರಣದಂತೆ ಕಂಡುಬರುತ್ತಿದ್ದು, ಈ ಮೂಲಕ ಲಾಭ ಮಾಡಿಕೊಳ್ಳುವ ತಂತ್ರ ನಡೆದಿದೆ ಎನ್ನಲಾಗುತ್ತಿದೆ.   ಈ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮೊದಲು ಬಿಡುಗಡೆಯಾದ ಆಡಿಯೋ, ನಂತರ ಮಹಿಳೆಯ ಹೇಳಿಕೆ ಎಲ್ಲವನ್ನೂ ಗಮನಿಸಿದರೆ ಒಂದು ವ್ಯೂಹ ರಚಿಸಿ ಬಲೆಗೆ ಕೆಡವಿ ಲಾಭ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ತನ್ನ ಮೇಲೆ ಸಚಿವರು ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಸಂತ್ರಸ್ತ ಮಹಿಳೆ ದೂರು ನೀಡಿಲ್ಲ. ಅಲ್ಲದೆ, ಆ ಮಹಿಳೆಯ ಕಡೆಯವರ್ಯಾರೂ ದೂರು ನೀಡಿಲ್ಲ. ಆದರೂ ಪ್ರಕರಣ ದೆಹಲಿ ಮಟ್ಟಕ್ಕೆ ಹೋಗಿದೆ. ಬಹಳ ನಾಜೂಕಾಗಿ ಕಾನೂನು ಅಂಶಗಳಿಗೆ ಸಿಗದಂತೆ ತಂತ್ರ ಹೆಣೆದು ಸಿಡಿ ಬಿಡುಗಡೆ ಮಾಡಲಾಗಿದೆ ಎಂದು ಕಂಡುಬರುತ್ತದೆ.

ಸಿಡಿ ಮಾಡಿರುವ ಪ್ರಕರಣದಲ್ಲಿ ಏಳೆಂಟು ಜನರ ಕೈವಾಡವಿದೆ ಎಂದು ಹೇಳಲಾಗಿದೆ. ಸಿಐಡಿ ಈ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.  ಮನುಷ್ಯನ ದೌರ್ಬಲ್ಯ (ವೀಕ್‍ನೆಸ್)ವನ್ನು ದುರುಪಯೋಗಪಡಿಸಿಕೊಂಡು ಎಲ್ಲರೂ ತಮ್ಮದೇ ರೀತಿಯಲ್ಲಿ ಈ ಪ್ರಕರಣವನ್ನು ಬಳಸಿಕೊಂಡಿದ್ದಾರೆ.  ವಿಡಿಯೋ ಶೂಟ್ ಮಾಡಿದವರು, ಮಹಿಳೆ, ಮಾಹಿತಿ ಹಕ್ಕುದಾರ ಪ್ರಕರಣ ಹೊರಬರದಂತೆ ತಡೆಯಲು ಮುಂದಾದವರು. ಸಿದ್ದರಾಮಯ್ಯ ಬೆಂಬಲಿಗರು, ವಿರೋಧಿಗಳು, ವಿಪಕ್ಷಗಳು, ರಾಜಕಾರಣಿಗಳು, ಕೆಲವು ಅಧಿಕಾರಿಗಳು ಬಹುತೇಕ ಎಲ್ಲರೂ ಈ ಪ್ರಕರಣವನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿರುವುದು ಸ್ಪಷ್ಟವಾಗುತ್ತದೆ.

ಬಹು ಹಿಂದೆಯೇ ತೆಗೆದಿದ್ದ ಈ ವಿಡಿಯೋ ಬಹಿರಂಗವಾಗದಂತೆ ಮಾಡಿದ ಪ್ರಯತ್ನಕ್ಕೆ ಬರೋಬ್ಬರಿ 10 ಕೋಟಿಯಷ್ಟು ಹಣ ವೆಚ್ಚವಾಗಿದೆ ಎಂದು ಹೇಳಲಾಗುತ್ತಿದೆ. ಹಣವೂ ಉಳಿಯಲಿಲ್ಲ, ಮರ್ಯಾದೆಯೂ ಉಳಿಯಲಿಲ್ಲ ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದ್ದು, ಸಹಾಯಕ್ಕೆ ಬಂದವರು ಪ್ರಕರಣ ಇತ್ಯರ್ಥಪಡಿಸಲು ಮುಂದಾದವರು ಎಲ್ಲರೂ ಸಿಡಿ ಬಹಿರಂಗವಾದ ಮೇಲೆ ಮುಗುಮ್ಮಾಗಿದ್ದಾರೆ. ಸಿಡಿಯಲ್ಲಿರುವ ಮಹಿಳೆಗೆ, ವಿಡಿಯೋ ಶೂಟ್ ಮಾಡಿದನೆನ್ನಲಾದ ಗನ್‍ಮ್ಯಾನ್‍ಗೆ ಆರ್‍ಟಿಐ ಕಾರ್ಯಕರ್ತನಿಗೆ ಈ ಪ್ರಕರಣದಲ್ಲಿ ಭಾರೀ ಪ್ರಮಾಣದ ಹಣ ಸಂದಾಯವಾಗಿತ್ತು ಎನ್ನಲಾಗಿದ್ದು, ಈ ಸಿಡಿ ಬಹಿರಂಗವಾಗುವ ಯಾವುದೇ ಸಾಧ್ಯತೆ ಇರಲಿಲ್ಲ ಎಂದೇ ನಂಬಿಕೊಳ್ಳಲಾಗಿತ್ತು. ಆದರೆ, ಈ ಪ್ರಕರಣ ಮುಂದಿಟ್ಟುಕೊಂಡು ಹಣ ಪಡೆದವರು ಕೂಡ ಮತ್ತೆ ಮತ್ತೆ ಹೆಣೆದ ತಂತ್ರಕ್ಕೆ ಸಿಡಿ ಬಹಿರಂಗವಾಗಿದೆ.

ಸಚಿವರಾಗಿದ್ದ ಮೇಟಿಯವರ ಈ ಸಿಡಿಯನ್ನು ಮಾಡಿರುವ ವ್ಯಕ್ತಿ ಸರ್ಕಾರಿ ನೌಕರ. ಮುಂದೆ ತನ್ನ ನೌಕರಿಗೆ ಕುತ್ತು ಬರುತ್ತದೆ ಎಂಬ ಭಯ ಇದ್ದಂತಿಲ್ಲ. ಹಣಕ್ಕಾಗಿಯೇ ಎಲ್ಲವನ್ನೂ ಮಾಡಿದಂತಿದೆ.
ಈ ಸಿಡಿಯನ್ನು ಮುಂದಿಟ್ಟುಕೊಂಡು 10 ವೈನ್‍ಸ್ಟೋರ್ ಲೈಸೆನ್ಸ್, ನಿಗಮ-ಮಂಡಳಿಗಳಿಗೆ ತಮಗೆ ಬೇಕಾದವರ ನೇಮಕ, ರಾಜೀನಾಮೆ ನೀಡಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮರು ನೇಮಕ ಮಾಡಬೇಕೆಂಬ ಭಾರೀ ಬೇಡಿಕೆಗಳನ್ನು ಮುಂದಿಟ್ಟಿದ್ದರು ಎನ್ನಲಾಗಿದೆ.  ಬ್ಲಾಕ್‍ಮೇಲ್ ಮೂಲಕ ಅವರು ನಿರೀಕ್ಷೆ ಮಾಡಿದ ಕೆಲಸಗಳು ಆಗಿಲ್ಲ. ಇಂಥದ್ದೊಂದು ಸಿಡಿ ಇದೆ ಎಂದು ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿಯೇ ಗೊತ್ತಾಗಿತ್ತು. ಈ ಪ್ರಕರಣದ ಸತ್ಯಾಸತ್ಯತೆಗಳನ್ನು ತಿಳಿಯಲು ಇಬ್ಬರು ಶಾಸಕರಿಗೆ ವಹಿಸಲಾಗಿತ್ತು. ಅವರು ಕೂಡ ಈ ಪ್ರಕರಣದ ಮೂಲಕ ರಾಜಕೀಯ ಲಾಭ ಪಡೆಯುವ ಯತ್ನ ನಡೆಸಿದರು.

ಸಿಡಿ ಬಹಿರಂಗವಾಗದಂತೆ ತಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ಬ್ಲಾಕ್‍ಮೇಲ್ ಆಗಿ ಪರಿವರ್ತನೆಯಾಗಿವೆ ಎಂದು ತಿಳಿದುಬಂದಿದೆ. ಇದನ್ನು ತಡೆಯಲು ಮುಂದಾಗುತ್ತಿದ್ದಂತೆ ತಮ್ಮ ರೇಟ್‍ಅನ್ನು ಹೆಚ್ಚಿಸಿಕೊಳ್ಳಲು ತೊಡಗಿದ್ದಾರೆ. ಹೀಗೆ ಈ ಪ್ರಕರಣವನ್ನು ಎಲ್ಲರೂ ಲಾಭಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.  ಈ ಪ್ರಕರಣವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಒಂದು ರೀತಿ ತಂತ್ರ ಹೆಣೆದರೆ ಮುಖ್ಯಮಂತ್ರಿ ವಿರುದ್ಧ ಕತ್ತಿ ಮಸೆಯುತ್ತಿದ್ದ ಕೆಲವು ಕಾಂಗ್ರೆಸ್ ಪಕ್ಷದವರು ಕೂಡ ತಂತ್ರ ಹೆಣೆದಿದ್ದಾರೆ.  ಈ ಎಲ್ಲದರ ಭಾಗವಾಗಿ ಈ ರಾಸಲೀಲೆ ಸಿಡಿ ಬಹಿರಂಗವಾಗಿದೆ, ಮಾಜಿ ಸಚಿವರ ಮಾನ ಹರಾಜಾಗಿದೆ, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ, ಈಗ ತನಿಖೆ ಮಾಡಲು ಸರ್ಕಾರ ಆದೇಶಿಸಿದೆ, ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಬ್ಲಾಕ್‍ಮೇಲ್ ಮೂಲಕ ಹಣ ತೆಗೆದುಕೊಂಡವರು ತಮ್ಮ ಬ್ಲಾಕ್‍ಮೇಲ್ ಪ್ರವೃತ್ತಿಯನ್ನು ಮತ್ತೆ ಹೆಚ್ಚಿಸಿದ್ದ ಕಾರಣಕ್ಕೆ ಪ್ರಕರಣ ಬಹಿರಂಗವಾಗಿದೆ. ಇಲ್ಲದಿದ್ದರೆ ಮುಚ್ಚಿಹೋಗುತ್ತಿತ್ತು.

ಭಾರತೀಯ ಸಂಸ್ಕøತಿಯಲ್ಲಿ ಮನುಷ್ಯನಿಗೆ ತನ್ನದೇ ಆದ ಇತಿಮಿತಿ ಇದೆ. ವಿವಾಹಿತ ಮಹಿಳೆಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೂ ಕೂಡ ಅಪರಾಧವಾಗುತ್ತದೆ. ಅದರಲ್ಲೂ ರಾಜಕಾರಣದಲ್ಲಿರುವವರು ವಿಶೇಷವಾಗಿ ಅಧಿಕಾರದಲ್ಲಿರುವವರು ಈ ಬಗ್ಗೆ ಎಚ್ಚರ ವಹಿಸಬೇಕಿತ್ತು. ಈ ಪ್ರಕರಣದಲ್ಲಿ ಎಚ್ಚರ ತಪ್ಪಿರುವುದಕ್ಕೆ ಮಾನ-ಮರ್ಯಾದೆ, ಘನತೆ-ಗೌರವ ಎಲ್ಲವೂ ಹರಾಜಾಗಿದೆ. ಬ್ಲಾಕ್‍ಮೇಲರ್‍ಗಳ ಕೈ ಮೇಲಾಗಿದೆ. ಇದೇ ರೀತಿ ಬ್ಲಾಕ್‍ಮೇಲ್ ಮಾಡುತ್ತ ಹೋದರೆ ವ್ಯವಸ್ಥೆ ಏನಾಗುತ್ತದೆ.  ಇಂತಹ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬ್ಲಾಕ್‍ಮೇಲ್ ನಡೆಸುವವರನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಉದ್ಯಮಿಗಳು, ರಾಜಕಾರಣಿಗಳು, ಸೆಲಬ್ರಿಟಿಗಳು, ಅಧಿಕಾರಿಗಳ ಮೇಲೆ ಬ್ಲಾಕ್‍ಮೇಲ್ ನಡೆಯುತ್ತಲೇ ಇರುತ್ತದೆ. ವ್ಯವಸ್ಥೆಯನ್ನು ಸುಧಾರಿಸುವ ಗುಣವಿರುವವರು ಬ್ಲಾಕ್‍ಮೇಲ್ ದಂಧೆಗೆ ಇಳಿಯಬಾರದು. ಬ್ಲಾಕ್‍ಮೇಲ್ ಮಾಡುವವರನ್ನು ನಿಯಂತ್ರಿಸಬೇಕು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin