ಮೇ 14ರಿಂದ ಪ್ರತಿ ಭಾನುವಾರ ಪೆಟ್ರೋಲ್, ಡೀಸೆಲ್ ಸಿಗಲ್ಲ
ನವದೆಹಲಿ. ಎ.18 : ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳ ಅಂದಾಜು 20 ಸಾವಿರ ತೈಲ ಮಾರಾಟ ಕೇಂದ್ರಗಳು ಪ್ರತಿ ಭಾನುವಾರದಂದು ಬಂದ್ ಆಗಲಿವೆ. ಮೇ 14ರಿಂದ ಪ್ರತಿ ಭಾನುವಾರ 24 ಗಂಟೆ ತೈಲ ಮಾರಾಟ ಸ್ಥಗಿತಗೊಳ್ಳಲಿದ್ದು ಇದರಿಂದ ತಮಿಳುನಾಡು ಒಂದರಲ್ಲಿಯೇ ರೂ. 150 ಕೋಟಿ ನಷ್ಟ ಆಗಲಿದೆ. ಪರಿಸರ ರಕ್ಷಣೆಗಾಗಿ ತೈಲ ಉಳಿಸುವ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಓಗೊಟ್ಟಿರುವ ಪೆಟ್ರೋಲ್ ಪಂಪ್ ಮಾಲಿಕರ ಸಂಘವು ಮೇ 14ರಿಂದ ಪ್ರತಿ ಭಾನುವಾರ ತೈಲ ಮಾರಾಟ ಬಂದ್ ಮಾಡುವುದಾಗಿ ತಿಳಿಸಿದೆ.
ಕೆಲವು ವರ್ಷಗಳ ಹಿಂದಯೇ ಭಾನುವಾರ ತೈಲ ಮಾರಾಟ ಕೇಂದ್ರಗಳನ್ನು ಮುಚ್ಚಲು ಮುಂದಾಗಿದ್ದೆವು. ಆದರೆ, ತೈಲ ಮಾರಾಟ ಸಂಸ್ಥೆಗಳು ಮಾಡಿದ್ದ ಮನವಿಯಿಂದಾಗಿ ನಿರ್ಧಾರದಿಂದ ಹಿಂದೆ ಸರಿದಿದ್ದರೆವು ಎಂದು ಇಂಡಿಯನ್ ಪೆಟ್ರೋಲಿಯಂ ಮಾರಟಗಾರರ ಒಕ್ಕೂಟ ತಿಳಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >