ಮೇ 6, 7 ರಂದು ಮೈಸೂರಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ : ಪಕ್ಷ ಸಂಘಟನೆಗೆ ಕಾರ್ಯತಂತ್ರ

Spread the love

bjp
ಬೆಂಗಳೂರು, ಏ.20- ಉಪ ಚುನಾ ವಣೆಯ ಸೋಲಿನಿಂದ ಕಂಗೆಡದೆ ಪಕ್ಷವನ್ನು ಮತ್ತಷ್ಟು ಬಲಿಷ್ಟವಾಗಿ ಸಂಘಟಿಸುವ ದೃಷ್ಟಿಯಿಂದ ಚರ್ಚಿಸಲು ಮೇ 6 ಹಾಗೂ 7 ರಂದು ರಾಜ್ಯ ಬಿಜೆಪಿಯ ಕಾರ್ಯ ಕಾರಿಣಿ ಸಭೆ ಮೈಸೂರಿನಲ್ಲಿ ನಡೆಯಲಿದೆ.ಪಕ್ಷದ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಡೆದ ಗೆಲುವಿಗೆ ಹಿಗ್ಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ನಾಯಕರ ಸಲಹೆಗಳನ್ನು ಪಡೆಯಲು ನಿರ್ಧರಿಸಲಾಗಿದೆ.ಸಿಎಂ ಸಿದ್ಧರಾಮಯ್ಯ ಅವರು ಉಪ ಚುನಾವಣೆಯ ಗೆಲುವನ್ನೇ ಪ್ರಮುಖವಾಗಿಟ್ಟು ಕೊಂಡು ತಮ್ಮ ಪಕ್ಷದೊಳಗಿನ ವೈರಿಗಳನ್ನು ಬಡಿದು ಹಾಕಿದ್ದು ಇದರ ಭರದಲ್ಲೇ ಅವರು ಮುಂದಿನ ಚುನಾವಣೆಗೆ ಸಜ್ಜಾಗುತ್ತಾರೆ .ಆದರೆ ಉಪಚುನಾವಣೆಗಳಲ್ಲಿನ ಗೆಲುವು- ಸೋಲುಗಳ ಆಧಾರದ ಮೇಲೆ ಸಾರ್ವತ್ರಿಕ ಚುನಾವಣೆಯ ಭವಿಷ್ಯ ನಿರ್ಧಾರವಾಗು ವುದಿಲ್ಲ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಬಹುತೇಕ ಉಪಚುನಾವಣೆಗಳಲ್ಲಿ ಬಿಜೆಪಿಯೇ ಗೆದ್ದಿತ್ತು. ಆದರೆ ಸಾರ್ವತ್ರಿಕ ಚುನಾವಣೆ ಯಲ್ಲಿ ಪಕ್ಷಕ್ಕೆ ಸೋಲಾಯಿತು. ಇದೇ ರೀತಿ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ ಸಮಾಜವಾದಿ ಪಕ್ಷ ಬಹುತೇಕ ಉಪಚುನಾವಣೆಗಳಲ್ಲಿ ಯಶಸ್ಸು ಗಳಿಸಿತು.ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿತು.

ಹೀಗಾಗಿ ಉಪಚುನಾವಣೆಗಳಲ್ಲಿ ಗಳಿಸಿದ ಗೆಲುವೇ ಸಾರ್ವತ್ರಿಕ ಚುನಾವಣೆಗೆ ಮಾನದಂಡವಾಗುವುದಿಲ್ಲ.ಆದ್ದರಿಂದ ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸುವುದೇ ಈ ಕಾರ್ಯಕಾರಿಣಿಯ ಮುಖ್ಯ ಉದ್ದೇಶ ಎಂದು ಮೂಲಗಳು ಹೇಳಿವೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದಿತ್ತು.ಬಿಜೆಪಿ ಕಳಪೆ ಸಾಧನೆ ಮಾಡಿತ್ತು.ಆದರೆ ಈ ಬಾರಿಯ ಉಪಚುನಾವಣೆಯಲ್ಲಿ ನಾವು ಗಣ ನೀಯ ಪ್ರಮಾಣದ ಮತಗಳನ್ನು ಗಳಿಸಿದ್ದೇವೆ.

ಒಂದು ವೇಳೆ ಜೆಡಿಎಸ್ ಪಕ್ಷವೇನಾದರೂ ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಳ್ಳದೆ ಹೋಗಿದ್ದರೆ ನಿಶ್ಚಿತವಾಗಿಯೂ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸುತ್ತಿತ್ತು. ಇವತ್ತು ಉಪಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ತಳೆಯುವ ನಿರ್ಧಾರವೇ ಬೇರೆ. ಸಾರ್ವತ್ರಿಕ ಚುನಾವಣೆಯಲ್ಲಿ ಅದು ಈ ತರದ ಒಳ ಒಪ್ಪಂದ ಮಾಡಿಕೊಂಡರೆ ಅದರ ನೆಲೆಯೇ ನಾಶವಾಗುತ್ತದೆ.ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆ ಸರಳವಲ್ಲ.ಅದೇ ರೀತಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಿಲ್ಲ.ವಾಸ್ತವವಾಗಿ ಸಿದ್ಧರಾಮಯ್ಯ ಸರ್ಕಾರ ಬಂದ ನಂತರ ದೇವದುರ್ಗ ಸೇರಿದಂತೆ ಹಲವೆಡೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೀಟನ್ನು ನಾವು ವಶಪಡಿಸಿಕೊಂಡಿದ್ದೇವೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ನಾವೇ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುತ್ತೇವೆ.ಹೀಗಾಗಿ ಧೈರ್ಯಗೆಡಬೇಡಿ . ಮುನ್ನುಗ್ಗಿ ಎಂದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆ ಕಾರ್ಯಕರ್ತರಿಗೆ ಕರೆ ನೀಡಲಿದೆ.ಜುಲೈ 16 ಹಾಗೂ 17 ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ವಿಶಾಖ ಪಟ್ಟಣ ದಲ್ಲಿ ನಡೆಯಲಿದ್ದು ಅದಕ್ಕೂ ಮುನ್ನ ರಾಜ್ಯ ಬಿಜೆಪಿಯಲ್ಲಿ ಆತ್ಮವಿಶ್ವಾಸ ಮರುಕಳಿಸಿದೆ ಎಂಬ ಸಂದೇಶ ಹೈಕಮಾಂಡ್ ನಾಯಕರಿಗೆ ರವಾನೆಯಾಗಬೇಕು ಎಂಬುದು ಪಕ್ಷದ ಹಿರಿಯ ನಾಯಕರ ಉದ್ದೇಶ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin