ಮೈತುಂಬಾ ಹಚ್ಚೆ ಹಾಕಿಸಿಕೊಂಡು ಗಿನ್ನಿಸ್ ದಾಖಲೆ ಸೃಷ್ಟಿಸಿದ ಅಜ್ಜಿ

GRecord

ವಾಷಿಂಗ್ಟನ್, ಸೆ.11- ಅಮೆರಿಕದ 67 ವರ್ಷದ ವೃದ್ಧೆಯೊಬ್ಬರು ಅಡಿಯಿಂದ ಮುಡಿಯವರೆಗೆ ಹಚ್ಚೆಗಳನ್ನು ಹಾಕಿಸಿಕೊಂಡು ಹೊಸ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ. ಫ್ಲಾರಿಡಾದ ಲೇಖಕಿ ಚಾರ್‍ಲೊಟ್ಟೆ ಗುಟ್ಟೆನ್‍ಬರ್ಗ್ ನಖಶಿಖಾಂತ ದೇಹದ ತುಂಬೆಲ್ಲ ಶೇ.91.5ರಷ್ಟು ವಿವಿಧ ರೀತಿಯ, ವಿವಿಧ ವಿನ್ಯಾಸದ ಮತ್ತು ವಿವಿಧ ಬಣ್ಣದ ಹಚ್ಚೆಗಳನ್ನು ಹಾಕಿಸಿಕೊಂಡು ಈ ದಾಖಲೆ ನಿರ್ಮಿಸಿದ್ದಾರೆ.  ದೇಹದ ಬಹುತೇಕ ಭಾಗಗಳ ಮೇಲೆ ಟ್ಯಾಟುಗಳನ್ನು ಹೊಂದಿರುವ ಜಗತ್ತಿನ ಏಕೈಕ ಮಹಿಳೆ ಎಂಬ ಕೀರ್ತಿಗೆ ಈಕೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಲು ಈಕೆ ತೆಗೆದುಕೊಂಡ ಅವಧಿ ಬರೋಬ್ಬರಿ 10 ವರ್ಷ.  2006ರಿಂದ ಈಕೆ ಹಚ್ಚೆಗಳನ್ನು ಹಾಕಿಸಿಕೊಂಡು ಹೊಸ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin