ಮೈಸೂರು ದಸರಾದಲ್ಲಿ ಈ ಬಾರಿ ಪಾರ್ಕಿಂಗ್ ಸಮಸ್ಯೆ ಎದುರಾಗುವುದಿಲ್ಲ

Sadara-aa

ಮೈಸೂರು, ಆ.31-ಈ ಬಾರಿ ದಸರಾಗಾಗಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಪ್ರತಿ ಬಾರಿ ಎದುರಾಗುವ ಪಾರ್ಕಿಂಗ್ ಸಮಸ್ಯೆ ನಿವಾರಣೆ ಯಾಗುವ ಲಕ್ಷಣಗಳು ಕಂಡುಬಂದಿದೆ. ಪ್ರತಿಬಾರಿ ದಸರಾದಲ್ಲಿ ಸಾಂಸ್ಕೃತಿಕ ನಗರದ ಅರಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ದಟ್ಟಣೆ ಕಿರಿಕಿರಿ ಜನರನ್ನು ಹೈರಾಣಾಗಿಸುತ್ತಿತ್ತು. ಆದರೆ ಈ ಬಾರಿ ಇಂತಹ ಸಮಸ್ಯೆಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗುತ್ತಿದೆ. ಮೈಸೂರು ದಸರಾ ಆರಂಭಕ್ಕೆ ಮುನ್ನವೇ ವಸ್ತುಪ್ರದರ್ಶನ ಆವರಣದಲ್ಲಿ ನಿರ್ಮಿಸುತ್ತಿರುವ ಪಾರ್ಕಿಂಗ್ ಪ್ಲಾಜಾ ಸಾರ್ವಜನಿಕರ ಬಳಕೆಗೆ ಉಪಯೋಗವಾಗಲಿದೆ. ಹಾಗಾಗಿ ಮೈಸೂರು ದಸರಾ ವಸ್ತು ಪ್ರದರ್ಶನ ಹಾಗೂ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಪಾರ್ಕಿಂಗ್ ಸಮಸ್ಯೆ ಇರುವುದಿಲ್ಲ.

ಈ ಹಿಂದೆ ದಸರಾ ಸಂದರ್ಭದಲ್ಲಿ ಪ್ರವಾಸಿಗರು ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದಾಗ ವಾಹನಗಳ ನಿಲುಗಡೆ ಸಮಸ್ಯೆಯಿಂದ ವಸ್ತುಪ್ರದರ್ಶನ ಮತ್ತು ಅರಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ದಟ್ಟಣೆಯಿಂದ ಪಾರ್ಕಿಂಗ್ ಹಾಗೂ ರಸ್ತೆ ಜಾಮ್ ಸಮಸ್ಯೆ ಉಂಟಾಗುತ್ತಿತ್ತು. ಆದರೆ ಈ ಬಾರಿ ಎರಡೂ ಸಮಸ್ಯೆ ನಿವಾರಣೆಯಾಗಲಿದೆ.  ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ 12 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಪ್ಲಾಜಾ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಈ ಸ್ಥಳದಲ್ಲಿ 500 ಕಾರುಗಳು, 800 ದ್ವಿಚಕ್ರ ವಾಹನಗಳು ಮತ್ತು 30 ಬಸ್ಗಳನ್ನು ನಿಲ್ಲಿಸುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ.

ದಸರಾ ವೇಳೆಗೆ ಈಜುಕೊಳ ನಿರ್ಮಾಣಪೂರ್ಣ:
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈಜುಕೊಳದ ನಿರ್ಮಾಣ ಈ ಬಾರಿ ದಸರಾ ವೇಳೆಗೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ. ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಕಿಡ್ಸ್ಪೂಲ್, ಪ್ರಾಕ್ಟಿಕಲ್ ಪೂಲ್ ಮತ್ತು ರೇಸಿಂಗ್ ಪೂಲ್ಗಳನ್ನು ನಿರ್ಮಿಸಲಾಗುತ್ತಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ವಸ್ತ್ರ ಬದಲಾವಣೆ ಕೊಠಡಿ, ಸ್ನಾನದ ಕೊಠಡಿಗಳು, ಜೊತೆಗೆ ತೆರೆದ ಸ್ನಾನ ಗೃಹಗಳನ್ನು ನಿರ್ಮಿಸಲಾಗಿದೆ.

► Follow us on –  Facebook / Twitter  / Google+

Sri Raghav

Admin