ಮೈಸೂರು ಮಾಹಾರಾಣಿ ತ್ರಿಶಿಕಾ ಹೆಸರಿನಲ್ಲಿ ಇನ್ಸ್ಟಾಗ್ರಾಮ್’ನಲ್ಲಿ ಫೇಕ್ ಅಕೌಂಟ್

Instragram-Trishika

ಮೈಸೂರು,ಮೇ 9-ಮೈಸೂರು ರಾಜಮನೆತನದ ತ್ರಿಶಿಕಾ ಅವರ ಹೆಸರಿನಲ್ಲಿ ನಕಲಿ ಅಕೌಂಟ್ ಇನ್ಸ್ಟಾಗ್ರಾಮ್  ನಲ್ಲಿ ಚಾಲನೆಯಲ್ಲಿದ್ದು , ಇದರಲ್ಲಿನ ಕಮೆಂಟ್ಸ್‍ಗಳಿಗೆ ಮತ್ತು ಅಕೌಂಟ್‍ಗಳಿಗೆ ಜವಾಬ್ದಾರರಲ್ಲ ಎಂದು ಮೈಸೂರು ಸಂಸ್ಥಾನದ ಯದುವೀರ್ ಅವರು ತಿಳಿಸಿದ್ದಾರೆ. ಇಸ್ಟ್ರಾಗ್ರಾಂನಲ್ಲಿ ಪತ್ನಿ ತ್ರಿಶಿಕಾ ಯಾವುದೇ ಅಕೌಂಟ್ ಹೊಂದಿಲ್ಲ. ಅವರ ಹೆಸರಿನಲ್ಲಿ ತ್ರಿಶಿಕಾ ಒಡೆಯರ್ 246 ಎಂಬ ಹೆಸರಿನ ಅಕೌಂಟ್ ನಕಲಿಯಾಗಿದ್ದು, ಇಸ್ಟ್ರಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೌಡ್ ಮಾಡಿದ್ದಾರೆ.ಇದರಲ್ಲಿನ ಕಮೆಂಟ್ಸ್‍ಗಳಿಗೆ ನಾವು ಜವಾಬ್ದಾರರಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.   ಈ ಹಿಂದೆ ಯದುವೀರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಈ ಅಕೌಂಟ್ ಅಪ್‍ಡೇಟ್ ಆಗುತ್ತಿದೆ. ಹಾಗಾಗಿ 2ನೇ ಬಾರಿಯೂ ಯದುವೀರ್ ಎಚ್ಚರಿಕೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin