ಮೊದಲು ಬಿಜೆಪಿ ನಾಯಕರ ಮನ ಪರಿವರ್ತನೆಯಾಗಲಿ : ಸಿಎಂ
ಮಧುಗಿರಿ, ಡಿ.11-ಚುನಾವಣೆ ಸಮಿಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಗೆ ದಲಿತರು, ಹಿಂದುಳಿದವರು ನೆನಪಾಗುತ್ತಾರೆ. ಪರಿವರ್ತನೆಗೊಳಗಾದ ರ್ಯಾಲಿ ಮಾಡಿ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಮೊದಲು ಆ ಪಕ್ಷದ ನಾಯಕರ ಮನ ಪರಿವರ್ತನೆಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಾಯ ಹೇಳಿದರು. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತಾನಾಡಿ ಅವರು ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಭ್ರಷ್ಟಾಚಾರವಿಲ್ಲದೆ ಪಾರದರ್ಶಕವಾಗಿ ಆಡಳಿತ ನೀಡಿದ್ದಾರೆ. ಮುಂದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತೆ ಹೇಳಿದರು.
ಮಾಜಿ ಪ್ರಧಾನಿ ದೀಗೌಡೇರೆ ನಮ್ಮ ಸರ್ಕಾರದ ಅವಧಿಯಲ್ಲಿ ಏನು ಬ್ಲಾಕ್ಚುಗೆ ಇಲ್ಲವೆಂದು ಹೇಳಿರುವುದು ನನಗೆ ಸಂತಸ ತಂದಿದೆ. ಮುಂದಿನ ಅವಧಿಗೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಈ ಭಾಗದಲ್ಲಿ ಹೆಚ್ಚು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ ಮುಂದಿನ ಚುನಾವಣೆಯಲ್ಲಿ ಮತ್ತೆ ಗೆಲ್ಲುವುದು ಶತ ಸಿದ್ದವಾದಿದೆ ಜೆ.ಡಿ.ಎಸ್. ಅಭ್ಯರ್ಥಿ ವೀರ ಬಂದ್ರಾಯ್ಯ ಕೆ.ಎನ್.ರಾಜಣ್ಣನವರಿಗೆ ಯಾವುದೇ ವಿಧದ ಸಮಬಲ ವ್ಯಕ್ತಿ ಅಲ್ಲ ಎಂದು ತಿಳಿಸಿದರು.
ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡಿದ್ದರಿಂದ 25 ಸಾವಿರ ರೈತರು ಅನೂಕುಲವಾಗಿದೆ. ಮಧುಗಿರಿಯು ಉಪಾವಿಭಾಗ ಕೇಂದ್ರವಾಗಿರುವುದರಿಂದ ಇದನ್ನು ಜಿಲ್ಲಾಧಿಕಾರಿ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಸಚಿವರಾದ ಟಿ.ಬಿ ಜಯಚಂದ್ರ, ಎಂ.ಆರ್ ಸೀತಾರಾಂ, ಶಾಸಕ ಶಿವಶಂಕರ್ ರೆಡ್ಡಿ, ಸಂಸದ ಮುಡ್ಡಹನುಮೆಗೌಡ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.