ಮೊದಲ ಬಾರಿಗೆ ಅಶ್ವರೂಢ ಕೀಡಾಪಟು ಮರಿಬಾಶೆಟ್ಟಿಗೆ ಸನ್ಮಾನ : ಹೆಮ್ಮೆ

9

ಬಾದಾಮಿ,ಮಾ.1- ವಿಶ್ವ ವಿಖ್ಯಾತ ಐತಿಹಾಸಿಕ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿಖ್ಯಾತ ಅಶ್ವರೂಢ ಕ್ರೀಡಾಪಟು ಮರಿಬಾಶೆಟ್ಟಿಯವರಿಗೆ ಸನ್ಮಾನ ಹಮ್ಮಿಕೊಂಡಿರುವುದು ಹೆಮ್ಮೆಯ ವಿಚಾರ, ಅವರು ಬಾದಾಮಿಯ ಸುಪುತ್ರರು. ಅವರಿಗೆ ತಡವಾಗಿ ಸನ್ಮಾನಿಸುತ್ತಿರುವುದು ಬೇಸರದ ಸಂಗತಿಯಾದರೂ ಈಗಲಾದರೂ ಅವರನ್ನು ಗೌರವಿಸುತ್ತಿರುವುದು ಈ ನಾಡಿಗೆ ಗೌರವ ಹೆಚ್ಚಾದಂತಾಗುತ್ತದೆ ಎಂದು ಮಾಜಿ ಶಾಸಕ ಎಮ್.ಕೆ. ಪಟ್ಟಣಶೆಟ್ಟಿ ಹೇಳಿದರು.ಅವರು ನಗರದ ಪುರಸಭಾ ಭವನದಲ್ಲಿ ಎಸ್.ಜಿ.ಮರಬಾಶೆಟ್ಟಿ ಅಭಿನಂದನಾ ಸಮಿತಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಮರಿಬಾಶೆಟ್ಟಿಯವರು ಮಹಾಕೂಟೇಶ್ವರನ ಹಾಗೂ ಕುಮಾರೇಶನ ಮಹಾನ್ ಭಕ್ತರಾಗಿದ್ದು ಇವರು ಮೌಂಟೇನ್ಲೀ ಪೊಸ್‍ರಿಗರ ಕಿರೀಟ ಪ್ರಾಯರಾಗಿದ್ದು ಮುಖ್ಯಮಂತ್ರಿ ಹಾಗೂ ರಾಷ್ಟ್ರಪತಿಗಳಿಂದ 2 ಬಾರಿ ಪದಕ ಪಡೆದುಕೊಂಡಿದ್ದಾರೆ.

ಮಾರ್ಚ್ 26ರಂದು ಅವರ ತವರಿನಲ್ಲಿ ಸನ್ಮಾನವಾಗದೆ ಇರುವುದರಿಂದ ಎಲ್ಲರೊಂದಿಗೆ ಚರ್ಚಿಸಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಯಶಸ್ಸಿಗೆ ತಾವು ಕಾರಣೀಭೂತರಾಗಬೇಕೆಂದು ಹೇಳಿದರು. ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ ಮರಿಬಾಶೆಟ್ಟಿಯವರ ಬಗ್ಗೆ ನನಗೆ ತಿಳಿದಿರಲಿಲ್ಲ. ಆದರೆ ಈ ಸಭೆ0ಯಲ್ಲಿ ಪ್ರಥಮ ಬಾರಿಗೆ ಅವರು ಮಾಡಿದ ಸಾದನೆಗಳನ್ನು ಕೇಳುತ್ತಿದ್ದರೆ ಮೈಯಲ್ಲಿ ರೋಮಾಂಚನವಾಗುತ್ತಿದೆ, ಇದು ನನಗಷ್ಟೆ ಅಲ್ಲ ಬೇರೆಯವರು ಹೊಸದಾಗಿ ಅವರ ಬಗ್ಗೆ ತಿಳಿದಾಗ ಇದೇ ಅನುಭವವಾಗುತ್ತದೆ, ಇಂತಹ ಮಹಾನ್ ಕ್ರೀಡಾಪಟುವನ್ನು ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.ಪುರಸಭಾಧ್ಯಕ್ಷ ಫಾರೂಕ ದೊಡಮನಿ ಮಾತನಾಡಿ ರಾಜ್ಯ, ದೇಶ ವಿದೇಶಗಳಲ್ಲಿ ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸಿ ದೇಶದ ಗೌರವವನ್ನು ಪ್ರಪಂಚದಾದ್ಯಂತ ಹೆಚ್ಚಿಸಿದ್ದು ನಮ್ಮ ಬಾದಾಮಿಯ ಮಗನೆಂದು ನೆನೆದಾಗ ಹರ್ಷವುಂಟಾಗುತ್ತದೆ, ಇವರಿಗೆ ಸನ್ಮಾನ ಕಾರ್ಯಕ್ರಮ ಕೈಗೊಳ್ಳುತ್ತಿರುವುದು ನಾಡಿನ ಹೆಮ್ಮೆಯಾಗಿದ್ದು ನಾನು ಈ ಕಾರ್ಯಕ್ರಮಕ್ಕೆ 10 ಸಾವಿರ ದೇಣಿಗೆಯನ್ನು ಕೊಡುತ್ತೇನೆ ಎಂದು ಹೇಳಿದರು.

ಎಮ್.ಎಚ್. ಚಲವಾದಿ ಮಾತನಾಡಿ ಅಶ್ವಕ್ರೀಡೆಯಲ್ಲಿ ಅಂತರಾಷ್ಟ್ರಮಟ್ಟದಲ್ಲಿ ಬಾದಾಮಿಯ ಕೀರ್ತಿಯನ್ನು ಹೆಚ್ಚಿಸಿದ್ದು ಇಂತಹ ವ್ಯಕ್ತಿಗೆ ಸನ್ಮಾನಿಸುತ್ತಿರುವುದು ನಮ್ಮ ಭಾಗ್ಯ, ಪ್ರತಿಯೊಬ್ಬರು ಮರಿಬಾಶೆಟ್ಟರ ಸಾಧನೆಗಳನ್ನು ತಿಳಿಯಬೇಕು. ಅವರಿಗೆ ಅಭಿನಂದಿಸುತ್ತ್ತಿರುವುದು ಒಳ್ಳೆಯ ಕೆಲಸ ಎಂದು ಹೇಳಿದರುಅಭಿನಂದನಾ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ಶಿರಶಿ ಮಾತನಾಡಿ ಮರಿಬಾ ಶರಟ್ಟಿಯವರಿಗೆ ಮಾರ್ಚ 26 ರಂದು ಅಭಿನಂದನಾ ಸಮಿತಿಯವರು ಸನ್ಮಾನ ಕಾರ್ಯಕ್ರಮ ಕೈಗೊಂಡಿದ್ದು ಅವರ ಜೀವನ ಚರಿತ್ರೆಯ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಿದ್ದೇವೆ, ಅನೇಕ ದಾನಿಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದು ಬಾದಾಮಿಯ ಸಮಸ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರುಈ ಸಬೆಯಲ್ಲಿ ಜಯದೇವ ಮಮದಾಪೂರ, ಮಲ್ಲಣ್ಣ ಎಲಿಗಾರ, ಪಿ.ಆರ್.ಗೌಡರ, ಶೀಲಕಾಂತ ಪತ್ತಾರ, ಡಿ.ಎಮ್.ಪೈಲ್,ಬಸವರಾಜ ತೀರ್ಥಪ್ಪನವರ, ಇಲಿಯಾಸ ಜಮಾದಾರ.ರೋಣದ ಹಾಗೂ ಪುರಸಭಾಸದಸ್ಯರು ಪಾಲ್ಗೊಂಡಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin