ಮೊಬೈಲ್ ಅಂಗಡಿ ಕಳ್ಳತನ

thifte

ತುಮಕೂರು, ಡಿ.15- ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಅಂಗಡಿ ಸೇರಿದಂತೆ ಅಂಗಡಿಗಳ ಶೆಟರ್ ಮೀಟಿ ಸುಮಾರು 20 ಸಾವಿರ ಮೊಬೈಲ್‍ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಮಧ್ಯರಾತ್ರಿ ನಡೆದಿದೆ.ಮಿಡಿಗೇಶಿ ಹೋಬಳಿಯ ಹೊಸಕೆರೆಯ ಬಸ್ ನಿಲ್ದಾಣ ಬಳಿ ಇರುವ ಸೂರ್ಯ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಅಂಗಡಿಯ ಶೆಟರ್ ಮೀಟಿ ಸುಮಾರು 20 ಸಾವಿರ ಬೆಲೆ ಬಾಳುವ ಮೊಬೈಲ್‍ಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದು, ನಂತರ ದಿನಸಿ ಅಂಗಡಿ ಮತ್ತು ವಾಯುಪುತ್ರ ವೈನ್ಸ್ ಅಂಗಡಿಯಲ್ಲೂ ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ.
ಗ್ರಾಮದಲ್ಲಿ ಪದೇ ಪದೇ ಕಳ್ಳತನ ವ್ಯಾಪಕವಾಗುತ್ತಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.ಸುದ್ದಿ ತಿಳಿದ ಕೂಡಲೇ ಮಿಡಿಗೇಶಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin