ಮೊಬೈಲ್ ಕಂಪನಿ ವಿರುದ್ಧ ಕೋರ್ಟ್‍ ಮೆಟ್ಟಿಲೇರಿದ ಧೋನಿ

Dhoni--01

ನವದೆಹಲಿ, ಜ.29-ಕರಾರು ಒಪ್ಪಂದ ಮುಗಿದಿದ್ದರೂ ತಾವು ಅದರ ಪ್ರಚಾರ ರಾಯಭಾರಿ ಎಂಬಂತೆ ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊಬೈಲ್ ಕಂಪನಿ ವಿರುದ್ಧ ಖ್ಯಾತ ಕ್ರಿಕೆಟಿಗ ಎಂ.ಎಸ್.ಧೋನಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ದೆಹಲಿ ಹೈಕೋರ್ಟ್‍ಗೆ ಧೋನಿ ಮನವಿ ಸಲ್ಲಿಸಿದ್ದಾರೆ. ಡಿಸೆಂಬರ್ 2012ರಲ್ಲೇ ನನ್ನ ಮತ್ತು ಮ್ಯಾಕ್ಸ್ ಮೊಬಿಲಿಂಕ್ಸ್ ಪ್ರೈವೇಟ್ ಕಂಪನಿ ನಡುವೆ ಉತ್ಪನ್ನ ಪ್ರಚಾರದ ಒಪ್ಪಂದ ಸಮಾಪ್ತಿಯಾಗಿತ್ತು. ಆದರೂ ಆ ಸಂಸ್ಥೆ ತಾವು ಈಗಲೂ ಮೊಬೈಲ್ ಫೋ ನ್‍ನ ಪ್ರಚಾರ ರಾಯಭಾರಿ ಎಂಬಂತೆ ಬಿಂಬಿಸುತ್ತಿದೆ. ಇದರಿಂದ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿಕೊಂಡಿದೆ ಎಂದು ಧೋನಿ ಆರೋಪಿಸಿದ್ದಾರೆ.

ಆ ಕಂಪನಿಯ ಉನ್ನತಾಧಿಕಾರಿಯನ್ನು ನ್ಯಾಯಾಲಯಕ್ಕೆ ಕರೆಸಿಕೊಂಡ ನ್ಯಾಯಮೂರ್ತಿ ಮನಮೋಹನ್ ಅವರು ತರಾಟೆಗೆ ತೆಗೆದುಕೊಂಡಿದ್ಧಾರೆ. ಕರಾರು ಒಪ್ಪಂದ ಅವಧಿ ಮುಗಿದಿದ್ದರೂ ಪ್ರಚಾರಕ್ಕಾಗಿ ಖ್ಯಾತ ಕ್ರಿಕೆಟ್ ನಟನನ್ನು ಬಳಸಿಕೊಂಡಿರುವುದು ತಪ್ಪು ಎಂದು ಹೇಳಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin