ಮೋಟಾರ್ ದುರಸ್ತಿಗೆ ಅನ್ನದಾನಿ ಆಗ್ರಹ

MANAVALI3

ಮಳವಳ್ಳಿ, ಸೆ.15- ನಂಜಾಪುರ ಏತ ನೀರಾವರಿ ಯೋಜನೆಗೆ ಅಳವಡಿಸಿರುವ 4 ಮೋಟಾರ್‍ಗಳು ಕೆಟ್ಟು ಬಹಳ ದಿನಗಳೇ ಕಳೆದಿದ್ದು ಕೂಡಲೇ ಸದರಿ ಮೋಟಾರ್‍ಗಳನ್ನು ದುರಸ್ತಿ ಮಾಡಿಸುವ ಮೂಲಕ ತಾಲ್ಲೂಕಿನ ನಾಲೆಗಳಿಗೆ ನೀರು ಹರಿಸಬೇಕೆಂದು ಮಾಜಿ ಶಾಸಕ ಡಾ.ಕೆ. ಅನ್ನದಾನಿ ಆಗ್ರಹಿಸಿದ್ದಾರೆ.ತಾಲ್ಲೂಕಿನ ಬಿಜಿ ಪುರ ಹಾಗೂ ಕಿರುಗಾವಲು ಭಾಗದ ಜಮೀನುಗಳಿಗೆ ನೀರೊದಗಿಸುವುದರ ಜೊತೆಗೆ ಟಿ ನರಸೀಪುರ ಭಾಗದ ಜಮೀನುಗಳಿಗೆ ನೀರೊದಗಿಸುವ ನಂಜಾಪುರ ಏತ ನೀರಾವರಿ ಯೋಜನೆಗೆ ಅಳವಡಿಸಲಾಗಿರುವ ಆರು ನೀರೆತ್ತುವ ಮೋಟಾರ್ ಪಂಪ್‍ಗಳ ಪೈಕಿ 4 ಪಂಪ್‍ಗಳು ಕೆಟ್ಟು ಬಹಳ ದಿನಗಳೇ ಕಳೆದಿದ್ದರೂ ಸಹ ಸದರಿ ಮೋಟಾರ್‍ಗಳನ್ನು ದುರಸ್ತಿಗೊಳಿಸಿ ತಾಲ್ಲೂಕಿನ ಜಮೀನುಗಳಿಗೆ ನೀರು ಒದಗಿಸುವಲ್ಲಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವ ಮಹಾದೇವಪ್ಪ ಅವರು ಸಹ ತಮ್ಮ ಭಾಗದ ನಾಲೆಯನ್ನು ದುರಸ್ತಿ ಮಾಡಿಕೊಳ್ಳುವ ಮೂಲಕ ತಾವು ಟಿ.ನರಸೀಪುರಕ್ಕೆ ಮಾತ್ರ ಸಚಿವರು ಎಂಬಂತೆ ವರ್ತಿಸಿ ತಾನು ಇಡೀ ರಾಜ್ಯಕ್ಕೆ ಸಚಿವರು ಎಂಬುದನ್ನು ಮರೆತಿದ್ದಾರೆ ಎಂದು ದೂರಿದರು.ಕೂಡಲೇ ಕೆಟ್ಟು ನಿಂತಿರುವ ಮೋಟಾರ್‍ಗಳನ್ನು ದುರಸ್ತಿಗೊಳಿಸಿ ತಾಲ್ಲೂಕಿನ ರೈತರ ಕೃಷಿ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವತ್ತ ಶಾಸಕರು ಕ್ರಮ ವಹಿಸಬೇಕು ಇಲ್ಲವಾದಲ್ಲಿ ರೈತರೊಡಗೂಡಿ ಪ್ರತಿಭಟನೆ ನಡೆಸಬೇಕಾಗುವುದು ಎಂದು ಅನ್ನದಾನಿ ಎಚ್ಚರಿಸಿದ್ದಾರೆ.

 

► Follow us on –  Facebook / Twitter  / Google+

Sri Raghav

Admin