ಮೋದಿ ಟಿಆರ್‍ಪಿ ರಾಜಕಾರಣ ಮಾಡುತ್ತಿದ್ದಾರೆ : ರಾಹುಲ್ ಗಾಂಧಿ ಕಟುಟೀಕೆ

Spread the love

Rahul-01

ನವದೆಹಲಿ, ಡಿ.2-ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಆದ ವರ್ಚಸ್ಸಿನಲ್ಲಿ ಬಂಧಿಯಾಗಿರುವ ಓರ್ವ ಕೈದಿ ಎಂದು ವ್ಯಂಗವಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಟಿಆರ್‍ಪಿ ರಾಜಕಾರಣ ಮಾಡುವುದರಲ್ಲೇ ಅವರು ಆಸಕ್ತರಾಗಿದ್ದಾರೆ ಎಂದು ಟೀಕಿಸಿದ್ದಾರೆ.  ಸೋನಿಯಾಗಾಂಧಿ ಅನುಪಸ್ಥಿತಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೋದಿ ಮೊದಲಿನಿಂದಲೂ ಟಿಆರ್‍ಪಿ (ಟಿವಿ ಚಾನೆಲ್‍ಗಳು ಟಿಆರ್‍ಪಿ ಹೆಚ್ಚಿಸಿಕೊಳ್ಳಲು ಮಾಡುವ ಗಿಮಿಕ್) ರಾಜಕೀಯ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಯಾವ ಪ್ರಧಾನಮಂತ್ರಿಯೂ ಇಂಥ ಟಿಆರ್‍ಪಿ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.

ಎಲ್ಲ ನಗದು ಕಾಳಧನವಲ್ಲ, ಹಾಗೆಯೇ ಎಲ್ಲ ಕಾಳಧನವೂ ನಗದು ಹಣವಲ್ಲ. ಆದರೆ ಮೋದಿ ಅವರು ಭಾರತದ ನಗದು ಆರ್ಥಿಕತೆಯನ್ನು ಕಪ್ಪು ಹಣವೆಂದು ಪರಿಗಣಿಸಿ ಗೊಂದಲಕ್ಕೆ ಒಳಗಾಗಿದ್ದಾರೆ. ದೇಶದ ಜನರನ್ನು ಗೊಂದಲದಲ್ಲಿ ಮುಳುಗಿಸಿ ಸಂಕಷ್ಟ ತಂದಿಟ್ಟಿದ್ದಾರೆ ಎಂದು ರಾಹುಲ್ ಟೀಕಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin