ಮೌಂಟ್ ಎವರೆಸ್ಟ್ ನಲ್ಲಿ 3 ಭಾರತೀಯರ ಶವ ಪತ್ತೆ

Spread the love

Mount-Rveest--01

ಕಠ್ಮಂಡು, ಮೇ 29-ಜಗತ್ತಿನ ಅತ್ಯುನ್ನತ ಪರ್ವತ ಮೌಂಟ್ ಎವರೆಸ್ಟ್ಆರೋಹಣದ ವೇಳೆ ಮೃತಪಟ್ಟಿದ್ದ ಮೂವರು ಭಾರತೀಯ ಪರ್ವತಾರೋಹಿಗಳ ಶವಗಳು ನಿನ್ನೆ ಪತ್ತೆಯಾಗಿವೆ. ಇವರಲ್ಲಿ ಇಬ್ಬರು ಕಳೆದ ವರ್ಷ ಶಿಖರ ಏರುವಾಗ ಸಾವಿಗೀಡಾಗಿದ್ದರು. ಈ ಮೂರು ಮೃತದೇಹಗಳನ್ನು ಹೆಲಿಕಾಪ್ಟರ್ ಮೂಲಕ ಹಿಮಾಲಯ ರಾಷ್ಟ್ರ ನೇಪಾಳದ ರಾಜಧಾನಿ ಕಠ್ಮಂಡುವಿಗೆ ತರಲಾಗಿದೆ. ಪರ್ವತಾರೋಹಿಗಳಾದ ಪರೇಶ್ ಚಂದ್ರನಾಥ್ (58) ಮತ್ತು ಗೌತಮ್ ಘೋಷ್(50) ಕಳೆದ ವರ್ಷ ಏಪ್ರಿಲ್ 7ರಂದು ಎವರೆಸ್ಟ್ ಪರ್ವತಾರೋಹಣದ ವೇಳೆ ನಾಪತ್ತೆಯಾಗಿದ್ದರು.ಭಾನುವಾರ ಅವರ ಶವಗಳು ಪತ್ತೆಯಾಗಿದೆ. ಮತ್ತೊಬ್ಬ ಪರ್ವತಾರೋಹಿ ರವಿಕುಮಾರ್ (27) ಕಳೆದ ವಾರ ವಿಶ್ವದ ಅತಿ ಎತ್ತರದ ಶಿಖರಾಗ್ರ ಏರುವಾಗ ಹಿಮಪ್ರಪಾತಕ್ಕೆ ಬಿದ್ದು ದುರಂತ ಸಾವಿಗೀಡಾಗಿದ್ದರು.  ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶವಗಳನ್ನು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin