ಮ್ಯಾಗ್ನೆಟ್ ನುಂಗಿದ ಬಾಲಕಿ ಪ್ರಾಣ ಉಳಿಸಿದ ವೈದ್ಯರು

Spread the love

Magnet
ಮಂಗಳೂರು, ಮೇ 29- ಆಟವಾಡುವಾಗ ಆಟಿಕೆಯ ಸಣ್ಣ ಮ್ಯಾಗ್ನೆಟ್ ನುಂಗಿದ್ದ 9 ವರ್ಷದ ಬಾಲಕಿಯ ಜೀವ ಉಳಿಸುವಲ್ಲಿ ಇಲ್ಲಿನ ಕೆಎಂಸಿ ವೈದ್ಯರು ಯಶಸ್ವಿಯಾಗಿದ್ದಾರೆ.  ನಗರದ ನಿವಾಸಿ ಪ್ರೇಮ್(ಹೆಸರು ಬದಲಿಸಿದೆ) ಎಂಬ ಬಾಲಕಿ ನಿನ್ನೆ ಸಂಜೆ ಆಟವಾಡುವಾಗ ಆಟಿಕೆಯ ಮ್ಯಾಗ್ನೆಟ್ ನುಂಗಿದ್ದಳು ತಡರಾತ್ರಿ ಬಾಲಕಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಪೊಷಕರು ಆತಂಕಗೊಂಡಿದ್ದರು. ತಕ್ಷಣ ಕೆಎಂಸಿ ಆಸ್ಪತ್ರೆಗೆ ಕರೆತಂದು ಎಕ್ಸ್‍ರೇ ತೆಗೆಸಿದಾಗ ಶ್ವಾಸಕೋಳದಲ್ಲಿ ಏನೋ ಸಿಕ್ಕಿಹಾಕಿಕೊಂಡಿರುವುದು ಗೊತ್ತಾಗಿದೆ.

ನಂತರ ಬಾಲಕಿಯನ್ನು ವಿಚಾರಿಸಿದಾಗ ತಾನು ಆಟವಾಡುವಾಗ ಸಣ್ಣ ಆಟಿಕೆ ವಸ್ತು ನುಂಗಿರುವುದಾಗಿ ತಿಳಿಸಿದ್ದಾಳೆ. ವೈದ್ಯರು ನಂತರ ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಅದು ಮ್ಯಾಗ್ನೆಟ್ ಎಂದು ತಿಳಿದಿದೆ. ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ಬ್ರಾಂಕೊಸ್ಕೋಪ್‍ನಿಂದ ನಿಧಾನವಾಗಿ ವಸ್ತುವನ್ನು ಹೊರತೆಗೆಯಲಾಗಿದೆ.
ಇದೊಂದು ಕಷ್ಟದ ಚಿಕಿತ್ಸೆ. ಸಫಲತೆ ವಿರಳ. ಆದರೆ, ಬಾಲಕಿ ಅದೃಷ್ಟ ಚೆನ್ನಾಗಿದ್ದು, ಜೀವ ಉಳಿದಿದೆ ಎಂದು ಮಕ್ಕಳ ತಜ್ಞವೈದ್ಯ ಡಾ.ಜಯತೀರ್ಥ ಜೋಷಿ ತಿಳಿಸಿದ್ದಾರೆ.

Sri Raghav

Admin