ಮ್ಯಾನ್ಮರ್‍ನ ಶಸ್ತ್ರಸಜ್ಜಿತ ಆಕ್ರಮಣಕಾರರು ಮತ್ತು ಯೋಧರ ನಡುವೆ ನಡೆದ ಘರ್ಷಣೆಗೆ 15 ಬಲಿ

Myanmar-01

ಯಾನ್‍ಗೋನ್, ಅ.12-ಮ್ಯಾನ್ಮರ್‍ನ ಹಿಂಸಾಚಾರಪೀಡಿತ ರಾಖೀನ್ ರಾಜ್ಯದಲ್ಲಿ ಶಸ್ತ್ರಸಜ್ಜಿತ ಆಕ್ರಮಣಕಾರರು ಮತ್ತು ಯೋಧರ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಮಾನ್ಮರ್‍ನ ಉತ್ತರ ಭಾಗದಲ್ಲಿರುವ ಪ್ಯೌಂಗ್‍ಪಿಟ್ ಗ್ರಾಮದಲ್ಲಿ ನಿನ್ನೆ ನೂರಾರು ವ್ಯಕ್ತಿಗಳು ಪಿಸ್ತೂಲ್‍ಗಳು ಮತ್ತು ಖಡ್ಗಗಳನ್ನು ಹಿಡಿದು ಪ್ರತಿಭಟನೆಯಲ್ಲಿ ತೊಡಗಿದ್ದಾಗ ಅದನ್ನು ತಡೆಯಲು ಭದ್ರತಾ ಪಡೆ ಮುಂದಾದಾಗ ಘರ್ಷಣೆ ನಡೆಯಿತು. ಈ ಘಟನೆಯಲ್ಲಿ ಸ್ಥಳದಲ್ಲೇ ನಾಲ್ವರು ಯೋಧರು ಸಾವಿಗೀಡಾಗಿದ್ದಾರೆ. ಇದಲ್ಲದೆ, ತೀವ್ರವಾಗಿ ಗಾಯಗೊಂಡು ಸುಮಾರು 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆಂದು ಸುದ್ದಿ ಮೂಲಗಳು ತಿಳಿಸಿವೆ.

ಇದಲ್ಲದೆ, ತೌಂಗ್ ಪಿಯಾಂಗ್ ನ್ಯಾರ್‍ನಲ್ಲೂ ನಡೆದ ಘರ್ಷಣೆಯಲ್ಲಿ ಅನೇಕ ಯೋಧರು ಮತ್ತು ಶಸ್ತ್ರಸಜ್ಜಿತ ಆಕ್ರಮಣಕಾರರು ಗಾಯಗೊಂಡಿದ್ದಾರೆ ಎಂದು ಎಂದು ಸರ್ಕಾರಿ ಒಡೆತನ ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮರ್ ವರದಿ ಮಾಡಿದೆ.

► Follow us on –  Facebook / Twitter  / Google+

Sri Raghav

Admin