ಮ್ಯಾನ್ಮಾರ್ ಜಲ ಉತ್ಸವ ದುರಂತದಲ್ಲಿ ಸತ್ತವರ ಸಂಖ್ಯೆ 320ಕ್ಕೇರಿಕೆ

Water-Fest
ಯಾಂಗನ್ (ಮ್ಯಾನ್ಮಾರ್), ಏ.19-ಮ್ಯಾನ್ಮಾರ್ ದೇಶಾದ್ಯಂತ ನಡೆದ ನಾಲ್ಕು ದಿನಗಳ ತಿಂಗ್ಯಾನ್ ಜಲ ಉತ್ಸವ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 320ಕ್ಕೇರಿದೆ. 1,000ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.  ಮ್ಯಾನ್ಮಾರ್‍ನ ವಿವಿಧ ಪ್ರಾಂತ್ಯಗಳಲ್ಲಿ ಜಲ ಉತ್ಸವದ ವೇಳೆ ಸಂಭವಿಸಿದ ವಿವಿಧ ದುರಂತಗಳಲ್ಲಿ ಸಾವು-ನೋವು ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮರಣದ ಪ್ರಮಾಣ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೊಸ ವರ್ಷವನ್ನು ಸ್ವಾಗತಿಸುವ ಜಲ ಯುದ್ಧದ ವೇಳೆ ನಡೆದ ಕೊಲೆ, ಇರಿತ, ದರೋಡೆ, ಕಳ್ಳತನ, ಮಾದಕ ವಸ್ತು ಬಳಕೆ ಮತ್ತು ಗುಂಪು ಘರ್ಷಣೆ ಸಂಬಂಧ 1,200ಕ್ಕೂ ಅಧಿಕ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.   ಮ್ಯಾನ್ಮಾರ್‍ನ ನೈಪಿ ತಾಪ್, ಯಾಂಗನ್, ಮಾಂಡೇಲಿಯ, ಸೈಗಂಗ್, ತನಿಂತಯಿ, ಬಾಗೋ, ಮಾಗ್ವೆ, ಮಾಸ್, ರಾಕೈನ್, ಶಾನ್ ಹಾಗೂ ಆಯೆಯವಡ್ಡಿ ಪ್ರಾಂತ್ಯಗಳಲ್ಲಿ ಈ ಸಾವು-ನೋವು ಸಂಭವಿಸಿವೆ.

Water-Fest--1

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Water-Fest--3

Water-Fest--2

Sri Raghav

Admin