ಯಡಿಯೂರಪ್ಪ ಅಭಿಮಾನಿಗಳ ಸಂಭ್ರಮಾಚರಣೆ

Spread the love

bjp

ಕೆ.ಆರ್.ಪೇಟೆ, ಅ.27- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರೇರಣಾ ಟ್ರಸ್ಟ್ ಲಂಚ ಪಡೆದ ಆರೋಪದಿಂದ ಮುಕ್ತಿಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನಿಂದ ಹರ್ಷಗೊಂಡ ತಾಲೂಕು ಬಿಜೆಪಿ ಕಾರ್ಯಕರ್ತರು, ಬಿಎಸ್‍ವೈಅಭಿಮಾನಿಗಳು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿ ವಿಜಯೋತ್ಸವ ಆಚರಣೆ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಾರಂಗಿ ಲಿಂಗರಾಜು, ಜಿಲ್ಲಾ ಸಹಕಾರ ಮೋರ್ಚಾ ಅಧ್ಯಕ್ಷ ತೋಟಪ್ಪಶೆಟ್ಟಿ, ತಾಲೂಕು ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಬೂಕನಕೆರೆ ಮಧುಸೂಧನ್ ಮತ್ತಿತರರ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಿ ಯಡಿಯೂರಪ್ಪ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾಗುವುದು ಸೂರ್ಯ-ಚಂದ್ರರಷ್ಟೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕು ಯುವ ಮೋರ್ಚಾ ಅಧ್ಯಕ್ಷ ಹೊಸಹೊಳಲು ಮಂಜುನಾಥ್, ಮುಖಂಡರಾದ ಶೀಳನೆರೆ ಸಿದ್ದೇಶ್, ಭರತ್, ಚೋಕನಹಳ್ಳಿ ಪ್ರಕಾಶ್, ಅಪ್ಪಾಜಿ, ಮಡುವಿನಕೋಡಿ ಗಂಗಾಧರ್, ಮೊಬೈಲ್ ಪರಮೇಶ್, ಮಹಿಳಾ ಮೋರ್ಚಾ ಘಟಕದ ನಂಜಮ್ಮ, ಟೌನ್ ಘಟಕದ ಬಾಲು, ನಟರಾಜ್, ಮತ್ತಿತರರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.=

► Follow us on –  Facebook / Twitter  / Google+

Sri Raghav

Admin