ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆ ಅಧಿಕಾರಿಯೇ ..? : ರಮೇಶ್ಕುಮಾರ್
ಬೆಂಗಳೂರು,ಮಾ.1-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೇ ಎಂದು ಪ್ರಶ್ನಿಸಿದ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಸಚಿವ ರಮೇಶ್ಕುಮಾರ್ ಡೈರಿ ಅಧಿಕೃತವಾಗಿ ಬಿಡುಗಡೆಯಾದರೆ ರಾಜೀನಾಮೆ ನೀಡುವ ಹೇಳಿಕೆಗೆ ಈಗಲೂ ನಾನು ಬದ್ದನಾಗಿದ್ದೇನೆ ಎಂದು ಹೇಳಿದರು. ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೈರಿಯನ್ನು ಸೀಜ್ ಮಾಡುವ ಅಧಿಕಾರ ಕೇವಲ ಐಟಿ ಇಲಾಖೆಗೆ ಇದೆ. ಡೈರಿ ಬಿಡುಗಡೆಯಾಗಿರುವುದನ್ನು ಐಟಿ ಇಲಾಖೆಯವರೇ ದೃಢಪಡಿಸಬೇಕು. ಒಂದು ವೇಳೆ ಐಟಿ ಡೈರಿಯನ್ನು ಬಿಡುಗಡೆ ಮಾಡಿದರೆ ನಾನು ರಾಜೀನಾಮೆ ನೀಡುತ್ತೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡುತ್ತಾರೆಂದು ತಿರುಗೇಟು ನೀಡಿದರು. ರಾಜಕೀಯ ಪಕ್ಷದವರು ಹೈಕಮಾಂಡ್ಗೆ ದುಡ್ಡು ಕೊಡಲ್ಲ ಎಂದರೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ಮದುವೆಯಾಗಿ ಸಂಸಾರವನ್ನು ರಸ್ತೆಯಲ್ಲಿ ಮಾಡಲು ಸಾಧ್ಯವೆ ಎಂದು ವ್ಯಂಗ್ಯವಾಡಿದರು.
ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರದು ಎನ್ನಲಾದ ಡೈರಿ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬೇಜಬ್ದಾರಿಯಿಂದ ವರ್ತಿಸುತ್ತಾರೆ. ಯಾರದೋ ಮನೆಯಲ್ಲಿ ಡೈರಿ ಸಿಕ್ಕಿದೆ. ಅದರಲ್ಲಿ ಏನೋ ಬರೆದಿದೆ ಎನ್ನುತ್ತಾರೆ. ಅದನ್ನು ಅಧಿಕೃತವಾಗಿ ಆದಾಯ ತೆರಿಗೆ ಇಲಾಖೆ ಬಿಡುಗಡೆಗೊಳಿಸಿದರೆ ಆಗ ನಾನು ಒಂದು ನಿಮಿಷವೂ ತಡಮಾಡದೆ ಸಿಎಂಗೆ ರಾಜೀನಾಮೆಗೆ ಒತ್ತಾಯಿಸುತ್ತೇನೆ. ರಾಜಕೀಯ ಪಕ್ಷಗಳು ದೇಣಿಗೆ ಕೊಡುವ ವಿಚಾರ ಬಹಿರಂಗ ಸತ್ಯ. ಅಂದರೆ ಗೊಮ್ಮಟನಿಗೆ ಬಟ್ಟೆ ಹಾಕಲ್ಲ ಎನ್ನುವುದನ್ನು ಫೆÇೀಟೊ ತೆಗೆದೇ ತೋರಿಸಬೇಕು ಎಂದು ವ್ಯಂಗ್ಯವಾಡಿದರು.
< Eesanje News 24/7 ನ್ಯೂಸ್ ಆ್ಯಪ್ >