ಯಾತ್ರಾ ನಿವಾಸ ಲೋಕಾರ್ಪಣೆ

Spread the love

10

ರೋಣ,ಫೆ.4- ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಯೂಬ್ಬರು ತಮ್ಮ ಮನಃಶಾಂತಿಗಾಗಿ ದೇವಸ್ಥಾನಗಳಿಗೆ ಹೆಚ್ಚಾಗಿ ತೆರಳುತ್ತಿದ್ದು, ಅಲ್ಲಿಗೆ ಆಗಮಿಸುವ ಭಕ್ತಾಧಿಗಳಿಗೆ ವಸತಿ ವ್ಯವಸ್ಥೆಗಾಗಿ ಯಾತ್ರಾ ನಿವಾಸವನ್ನು ನಿರ್ಮಾಣ ಮಾಡುವುದರಿಂದ ಭಕ್ತರಿಗೆ ಸಹಾಯವಾಗುತ್ತಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.ನಿನ್ನೆ ಪಟ್ಟಣದ ತಳ್ಳಿಹಾಳ ಒಳ ರಸ್ತೆಯಲ್ಲಿರುವ ಕಾಳಿಕಾದೇವಿ ದೇವಸ್ಥಾನದಲ್ಲಿ ಪ್ರವಾಸೋಧ್ಯಮ ಇಲಾಖೆಯ 2014-2015ನೇ ಸಾಲಿನ ಬಂಡವಾಳ ವೆಚ್ಚಗಳ ಯೋಜನೆಯಡಿಯಲ್ಲಿ 35ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಾಣವಾದ ವಿಶ್ವಚೇತನ ಯಾತ್ರಾ ನಿವಾಸದ ನೂತನ ಕಟ್ಟಡ ಲೋಕಾರ್ಪಣಿ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ದೇವರು, ಯಚ್ಚರೇಶ್ವರ ಮಠದ ಮೇಘರಾಜ ಸ್ವಾಮೀಜಿ, ಅಜರತ್ ಸೈಯದ ಸುಲೇಮಾನ ಅಜ್ಜನವರು ವಹಿಸಿಕೊಂಡು. ನಂತರ ಆರ್ಶೀವಚನ ನೀಡಿದರು.ವೇದಿಕೆ ಮೇಲೆ ಪುರಸಭೆ ಅಧ್ಯಕ್ಷ ಶಫೀಕ ಮೂಗನೂರ, ಎಪಿಎಂಸಿ ಸದಸ್ಯ ರಾಜಣ್ಣ ಹೂಲಿ, ಯೋಗೇಶ ಕಮ್ಮಾರ್, ಪಿಕಾರ್ಡ ಬ್ಯಾಂಕ ಅಧ್ಯಕ್ಷ ಬಸವರಾಜ ನವಲಗುಂದ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೌನೇಶ ಹೂಸಮನಿ, ಶಂಕ್ರಪ್ಪ ಬಡಿಗೇರ, ಈಶ್ವರ ಪತ್ತಾರ, ರುದ್ರೇಶ ಬಡಿಗೇರ, ವಿಷ್ಣು ಪತ್ತಾರ, ಬಸವರಾಜ ಪೋತದಾರ, ಕಾಳೇಶ ಪೋತದಾರ, ನ್ಯಾಯವಾದಿ ವಿ.ಡಿ. ಪವಾಸ್ಕರ, ಎ.ಎನ್. ಬಡಿಗೇರ, ಬಸವಂತಪ್ಪ ಪೋತದಾರ, ನಾರಾಯಣ ವಡ್ಡಟ್ಟಿ, ಆನಂದ ಬಡಿಗೇರ, ಈಶ್ವರ ಪತ್ತಾರ ಸೇರಿದಂತೆ ಎಲ್ಲಾ ಸಮಾಜದ ಹಿರಿಯರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin