ಯಾರಾಗಲಿದ್ದಾರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ..?

Uttar-Pradesh-CM

ಲಖನೌ, ಮಾ.11- ರಾಷ್ಟ್ರಾದ್ಯಂತ ಭಾರೀ ಕೂತೂಹಲ ಮೂಡಿಸಿದ್ದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಭಾರೀ ಬಹುಮತ ಪಡೆದಿದ್ದು, ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ.   ಈಗಾಗಲೇ ಪ್ರಬಲ ಐವರು ನಾಯಕರು ಮುಖ್ಯಮಂತ್ರಿ ರೇಸ್‍ನಲ್ಲಿದ್ದಾರೆ. ಮೊದಲನೆಯದಾಗಿ ಮನೋಜ್ ಸಿನ್ಹ ಅವರು ಪ್ರಧಾನಿ ನರೇಂದ್ರಮೋದಿಯವರ ಸಚಿವ ಸಂಪುಟದಲ್ಲಿ ದೂರ ಸಂಪರ್ಕ ಸಚಿವರಾಗಿದ್ದಾರೆ. ಎರಡು ಬಾರಿ ಉತ್ತರ ಪ್ರದೇಶದಿಂದ ಸಂಸತ್ತಿಗೆ ಆಯ್ಕೆಯಾಗಿದ್ದು, ಮೇಲ್ಜಾತಿಯ ಪ್ರಬಲ ನಾಯಕರಾಗಿರುವ ಇವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಮತ್ತೊಬ್ಬ ನಾಯಕ ರಾಜ್ಯ ಬಿಜೆಪಿ ಅಧ್ಯಕ್ಷ ಕೇಶವ ಪ್ರಸಾದ್ ಮೌರ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಟೊಂಕ ಕಟ್ಟಿ ನಿಂತು ಶ್ರಮಿಸಿದ ಅವರು, ಕೂಡ ಮುಖ್ಯಮಂತ್ರಿ ರೇಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ.  ಇವರ ವಿಶ್ವ ಹಿಂದೂ ಪರಿಷತ್ ನಾಯಕರ ಜತೆ ಅವಿನಾಭಾವ ಸಂಬಂಧವಿದ್ದು, 1990ರಲ್ಲಿ ವಿಹೆಚ್‍ಪಿ ನಾಯಕರ ಜತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಹೋರಾಟ ನಡೆಸಿದರು. ಹೀಗಾಗಿ ಹಿಂದುಳಿದ ಪಂಗಡದ ಪ್ರಬಲ ಮುಖಂಡರಾಗಿರುವ ಕೇಶವ ಪ್ರಸಾದ್ ಕೂಡ ಮುಖ್ಯಮಂತ್ರಿಯಾಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.
ಇನ್ನೊಬ್ಬ ಪ್ರಬಲ ನಾಯಕ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಕೂಡ ಮುಖ್ಯಮಂತ್ರಿ ರೇಸ್‍ನಲ್ಲಿದ್ದಾರೆ. ಈಗಾಗಲೇ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ಅವರನ್ನು ಕೆಲವು ಮುಖಂಡರು ಕೂಡ ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸಿದ್ದು, ಆರ್‍ಎಸ್‍ಎಸ್ ವರಿಷ್ಠರು ಈ ಬಗ್ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ ಪ್ರಬಲ ನಾಯಕನಾಗಿರುವ ಸಂಸದ ಮಹೇಶ್ ಶರ್ಮ ಹೆಸರು ಕೂಡ ಕೇಳಿಬರುತ್ತಿದೆ. ಅಲ್ಲದೆ, ದಿನೇಶ್ ಶರ್ಮ ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜತೆ ನಿಕಟ ಸಂಬಂಧ ಹೊಂದಿದ್ದು, ಇವರು ಕೂಡ ಮುಖ್ಯಮಂತ್ರಿ ರೇಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ.  ಹೀಗಾಗಿ ಮೇಲಿನ ಐವರು ಮುಖ್ಯಮಂತ್ರಿ ಹುದ್ದೆಯಲ್ಲಿ ಕಾಣಿಸಿಕೊಂಡಿರುವ ಪ್ರಬಲ ನಾಯಕರಾಗಿದ್ದು, ಯಾರಿಗೆ ಸಿಎಂ ಪಟ್ಟ ಸಿಗುವುದು ಎಂಬುದಕ್ಕೆ ಮುಂದಿನ ಎರಡು ದಿನಗಳಲ್ಲಿ ಉತ್ತರ ಸಿಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin