ಯುಎಇನ ಒಟ್ಟು ಜನಸಂಖ್ಯೆಯಲ್ಲಿ ಶೇ.88ರಷ್ಟು ಮಂದಿ ವಿದೇಶಿ ಮೂಲದವರು

UAE
ಅಬುಧಾಬಿ, ಮೇ 19-ಯುನೈಟೆಡ್ ಅರಬ್ ಎಮಿರೆಟ್ಸ್(ಯುಎಇ) ಸಂಯುಕ್ತ ಗಣರಾಜ್ಯ ಸರಾಸರಿ ಜನಸಂಖ್ಯೆ ದೃಷ್ಟಿಯಿಂದ ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ವಲಸಿಗರು ನೆಲೆಸಿರುವ ದೇಶ.   ಯುಎಇನ ಒಟ್ಟು ಜನಸಂಖ್ಯೆಯಲ್ಲಿ ಶೇ.88ರಷ್ಟು ಮಂದಿ ವಿದೇಶಿ ಮೂಲದವರಿದ್ದಾರೆ. ಇವರಲ್ಲಿ 30.50 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ. ನಂತರದ ಸ್ಥಾನದಲ್ಲಿ ಈಜಿಪ್ಟ್ (9.35 ಲಕ್ಷ) ಮತ್ತು ಪಾಕಿಸ್ತಾನ(9.06 ಲಕ್ಷ) ಇದೆ ಎಂದು ವಿಶ್ವ ಸಂಸ್ಥೆ ಪ್ರಕಟಿಸಿರುವ ಅಂಕಿಅಂಶಗಳನ್ನು ಉಲ್ಲೇಖಿಸಿ ಬ್ರಿಟನ್‍ನ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.   ಯುಎಇ ಹೊರತುಪಡಿಸಿದರೆ ಕತಾರ್ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆ ವಲಸಿಗರ ದೇಶವಾಗಿದೆ. ಆ ದೇಶದ ಶೇ. 75ರಷ್ಟು ಮಂದಿ ವಿದೇಶ ಮೂಲದವರಾಗಿದ್ದಾರೆ. ಅಲ್ಲೂ ಭಾರತೀಯರು ಗರಿಷ್ಠ ಸಂಖ್ಯೆಯಲ್ಲಿದ್ದಾರೆ (6.46 ಲಕ್ಷ)
ಕುವೈತ್ ಮೂರನೇ ಸ್ಥಾನದಲ್ಲಿದ್ದು, ಆ ರಾಷ್ಟ್ರದ ಶೇ.74ರಷ್ಟು ವಿದೇಶಿ ವಲಸಿಗರಲ್ಲೂ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOSorigin 

Sri Raghav

Admin