ಯುಎಇಯಲ್ಲಿ ಸಂತ್ರಸ್ತರಾದ 41 ಭಾರತೀಯ ನಾವಿಕರ ವಿಮೋಚನೆಗೆ ಕ್ರಮ

Sushma-Swaraj

ನವದೆಹಲಿ, ಜ.10-ಯುಎಇಯ ಅಜ್ಮಾನ್‍ನಲ್ಲಿ ಸೂಕ್ತ ದಾಖಲೆಪತ್ರಗಳಿಲ್ಲದೇ ವ್ಯಾಪಾರಿ ನೌಕೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ 41 ಭಾರತೀಯರ ರಕ್ಷಣೆ ಮತ್ತು ಬಿಡುಗಡೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.   ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸಂತ್ರಸ್ತ ನಾವಿಕರಿಗೆ ಆಹಾರ ಮತ್ತು ಅಗತ್ಯವಾದ ಎಲ ವಸ್ತುಗಳನ್ನು ಪೂರೈಕೆ ಮಾಡುವಂತೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎರಡು ನೌಕೆಗಳ ಕ್ಯಾಪ್ಟನ್‍ಗಳು, ಹಡುಗುಗಳ ಮಾಲೀಕರು ಹಾಗೂ ಯುಎಇ ಸರ್ಕಾರವನ್ನು ಈ ಸಂಬಂಧ ನಾವು ಈಗಾಗಲೇ ಸಂಪರ್ಕಿಸಿದ್ದೇವೆ. ಸಂತ್ರಸ್ತ ನಾವಿಕರಲ್ಲಿ ಮುಂದಿನ ಎರಡು ವಾರಗಳಿಗೆ ಅಗತ್ಯವಾದ ಆಹಾರ ಮತ್ತು ಇತರ ವಸ್ತುಗಳ ಪೂರೈಕೆ ಇದೆ. ನಾವಿಕ ಸಿಬ್ಬಂದಿಯ ಬಿಡುಗಡೆಗಾಗಿ ಸರ್ಕಾರವು ತೀವ್ರ ಪ್ರಯತ್ನಗಳನ್ನು ಮುಂದುವರಿಸಿದ್ದು, ಎಲ್ಲ ನೆರವು ನೀಡಲಿದೆ ಎಂದು ಅವರು ಹೇಳಿದ್ದಾರೆ.

ವರದಿಗಳ ಪ್ರಕಾರ, ಅಜ್ಮಾನ್‍ನಲ್ಲಿರುವ ಲಂಗರು ಹಾಕುವ ಸಮುದ್ರ ಪ್ರದೇಶದಲ್ಲಿರುವ ನಾಲ್ಕು ಅನುಪಯೋಗಿ ನೌಕೆಗಳಲ್ಲಿ 41 ಭಾರತಿಯರು ಸಿಲುಕಿದ್ದಾರೆ. ಇವರೆಲ್ಲರೂ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ದೆಹಲಿ, ಉತ್ರರಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜÁಬ್, ಹರ್ಯಾಣ, ಬಿಹಾರ ಮತ್ತು ಉತ್ತರಖಂಡ್ ರಾಜ್ಯಗಳಿಗೆ ಸೇರಿದವರು. ಈ ನೌಕೆಗಳಲ್ಲಿ ಎರಡು ಹಡುಗುಗಳಿಗೆ ರಂಧ್ರವಾಗಿದ್ದು, ಅವು ಮುಳುಗುವ ಅಪಾಯವಿದೆ. ಈ ಹಡುಗುಗಳ ಕಂಪನಿಯ ಮಾಲೀಕರು ಸಿಬ್ಬಂದಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin