ಯುಪಿಎಸ್‍ಸಿಯಲ್ಲಿ ವಿವಿಧ ಉದ್ಯೋಗವಕಾಶಗಳು

UPSC

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕ ರಸಾಯನಶಾಸ್ತ್ರಜ್ಞ ವಿಜ್ಞಾನಿ ಸೇರಿದಂತೆ ಇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 28
ಹುದ್ದೆಗಳ ವಿವರ
1.ಸಹಾಯಕ ಆಯುಕ್ತರು – 01
2.ವೈಮಾನಿಕ ಅಧಿಕಾರಿ – 12
3.ವಿಜ್ಞಾನಿ ‘ಬಿ’ (ಮ್ಯಾಕಾನಿಕಲ್)
4.ಕಿರಿಯ ವಿಜ್ಞಾನಿ ಅಧಿಕಾರಿ (ಸ್ಫೋಟಕ) – 02
5. ಸಹಾಯಕ ರಸಾಯನಶಾಸ್ತ್ರಜ್ಞ – 11
ವಿದ್ಯಾರ್ಹತೆ : ಕ್ರ ಸಂ 1,3,4,5ರ ಹುದ್ದೆಗೆ ಸ್ನಾತಕೋತ್ತರ ಪದವಿ, ಕ್ರ ಸಂ 2ರ ಹುದ್ದೆಗೆ ಸ್ನಾತಕ ಪದವಿ (ಹುದ್ದೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಿಳಿಯಲು ಅಧಿಕೃತ ಅಧಿಸೂಚನೆಯನ್ನು ಗಮನಿಸಿ) ಪಡೆದಿರಬೇಕು.
ವಯೋಮಿತಿ : ಕ್ರ ಸಂ 1ರ ಹುದ್ದೆಗೆ ಗರಿಷ್ಠ 40, 2 ಮತ್ತು 3ರ ಹುದ್ದೆಗೆ 35, 4 ಮತ್ತು 5ರ ಹುದ್ದೆಗೆ 30 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ,ಪ.ಪಂದವರಿಗೆ 5 ವರ್ಷಗಳ ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಪಿಎಚ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶಲ್ಕದಿಂದ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳಿಗೆ 25 ರೂ ನಿಗದಿಗೊಳಿಸಲಾಗಿದೆ. ಶುಲ್ಕವನ್ನು ಎಸ್‍ಬಿಐ ಬ್ಯಾಂಕ್ ಮೂಲಕ ಪಾವತಿಗೆ ಸೂಚಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-02-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.upsconline.nic.in ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Sri Raghav

Admin