ಯುವತಿ ಜೊತೆ ಆಟೋ ಚಾಲಕನಿಂದ ಅಸಭ್ಯ ವರ್ತನೆ

Spread the love

Auto-girl

ಬೆಂಗಳೂರು, ಮೇ 11- ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ ಚಾಲಕನ ವಿರುದ್ಧ ಕಬ್ಬನ್‍ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೇ 9ರಂದು ರಾತ್ರಿ 7.15ರಲ್ಲಿ ವಿಠ್ಠಲ್ ಮಲ್ಯ ರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಬಳಿ ಯುವತಿಯೊಬ್ಬರು ಆಟೋ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆಟೋವನ್ನು ಹತ್ತಿದ ಯುವತಿ ಜತೆ ಮಾರ್ಗಮಧ್ಯೆ ಚಾಲಕ ಅಸಭ್ಯವಾಗಿ ವರ್ತಿಸಿದ್ದನಲ್ಲದೆ 300ರೂ. ಕಿತ್ತುಕೊಂಡಿದ್ದಾನೆ. ಈ ಸಂಬಂಧ ಯುವತಿ ಕಬ್ಬನ್‍ಪಾರ್ಕ್ ಪೊಲೀಸರಿಗೆ ಆಟೋ ಚಾಲಕನ ವಿರುದ್ಧ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin