ಯುವರಾಜ್ ಸಿಂಗ್ ಮದುವೆಯಲ್ಲಿ ರಂಗು ಹೆಚ್ಚಿಸಲಿದೆ ವಿರಾಟ್- ಅನುಷ್ಕಾ ಜೋಡಿ

Yuvaraj-Singh---01

ನವದೆಹಲಿ,ನ.27– ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಯುವರಾಜ್‍ಸಿಂಗ್ ಹಾಗೂ ಹಾಲಿವುಡ್ ತಾರೆ ಹೆಜೆಲ್ ಕಿಚ್ ಮದುವೆಯ ರಂಗು ದಿನದಿಂದ ದಿನಕ್ಕೆ ಏರತೊಡಗಿದೆ. ಇತ್ತೀಚೆಗೆ ತಮ್ಮ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿರುವ ಯುವಿ ಈಗ ತನ್ನ ವಿವಾಹಕ್ಕೆ ಆಗಮಿಸಲೆಂದು ಬಾಲಿವುಡ್ ನಟಿ ಹಾಗೂ ವಿರಾಟ್ ಕೊಹ್ಲಿಯ ಮನದನ್ನೆ ಅನುಷ್ಕಾಶರ್ಮಾಗೂ ಆಮಂತ್ರಣ ನೀಡಿರುವುದರಿಂದ ವಿವಾಹ ಮಹೋತ್ಸವದ ರಂಗು ಮತ್ತಷ್ಟು ಏರಿದೆ. ಈಗಾಗಲೇ ಈ ವಿವಾಹಕ್ಕೆ ಪಾಲ್ಗೊಳ್ಳಲು ವಿನೂತನ ರೀತಿಯಲ್ಲಿ ಪ್ಲಾನ್ ಮಾಡಿರುವ ಅನುಷ್ಕಾಶರ್ಮಾ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ವೀಕ್ಷಿಸುವ ನೆಪದಲ್ಲಿ ಮೊಹಾಲಿಗೆ ಹಾರಿದ್ದು ಈ ಪಂದ್ಯ ಮುಗಿದ ಬಳಿಕ ತನ್ನ ಪ್ರಿಯಕರ ಹಾಗೂ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಕೆಲ ಕಾಲ ಸಮಯವನ್ನು ಕಳೆಯಲು ಯೋಚಿಸಿದ್ದಾಳೆ.

ಅನುಷ್ಕಾ ಹಾಗೂ ವಿರಾಟ್‍ಕೊಹ್ಲಿಗೆ ಯುವರಾಜ್‍ಸಿಂಗ್ ಉತ್ತಮ ಗೆಳೆಯನಾಗಿರುವುದರಿಂದ ನವೆಂಬರ್ 30 ರಂದು ಚಂಡೀಘಡದಲ್ಲಿ ನಡೆಯಲಿರುವ ವಿವಾಹಕ್ಕೆ ತನ್ನ ಪ್ರಿಯಕರನೊಂದಿಗೆ ಅನುಷ್ಕಾ ಪಾಲ್ಗೊಳ್ಳುತ್ತಿರುವುದಾಗಿ ಮೂಲಗಳು ತಿಳಿಸಿವೆ. ಅತ್ತ ಸತತ ಪಂದ್ಯಗಳನ್ನಾಡುತ್ತಿರುವ ವಿರಾಟ್‍ಗೂ ಕೊಂಚ ವಿಶ್ರಾಂತಿ ಬೇಕಾಗಿರುವುದರಿಂದ ಯುವಿಯ ಮದುವೆಗೆ ಅನುಷ್ಕಾಳೊಂದಿಗೆ ಅಟೆಂಡ್ ಆಗುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ವಿರಾಟ್ ಯೋಚಿಸಿದ್ದಾರಂತೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin