ಯುವರಾಜ ಕಾಲೇಜಿನಲ್ಲಿ ಎಂಬಿಎ ಕೋರ್ಸ್ ರದ್ದು

Spread the love

yuvaraj--college
ಮೈಸೂರು,ಆ.12-ನಗರದ ಯುವರಾಜ ಕಾಲೇಜಿನಲ್ಲಿ ಎಂಬಿಎ ಕೋರ್ಸ್‍ನ್ನು ರದ್ದು ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ ಅಪರ ಕಾರ್ಯದರ್ಶಿ ಮೈಸೂರು ವಿವಿಗೆ ನೋಟಿಸ್ ನೀಡಿದೆ.ಕಳೆದ ಮೂರು ವರ್ಷಗಳ ಹಿಂದೆ ಯುವರಾಜ ಕಾಲೇಜಿನಲ್ಲಿ ಎಂಬಿಎ ಕೋರ್ಸ್‍ನ್ನು ಪ್ರಾರಂಭ ಮಾಡಲಾಗಿತ್ತು. ಆದರೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅನುಮೋದನೆ ಪಡೆಯದೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಎಂಬಿಎ ರದ್ದು ಮಾಡುವಂತೆ ಶಿಕ್ಷಣ ಇಲಾಖೆ ಮೈಸೂರು ವಿಶ್ವವಿದ್ಯಾಲಯಕ್ಕೆ ಅಧಿಕೃತ ಸೂಚನೆ ನೀಡಿದೆ.
ಪ್ರಸ್ತುತ ಯುವರಾಜ ಕಾಲೇಜಿನಲ್ಲಿ ಎಂಬಿಎ ಕೋರ್ಸ್ ಪ್ರಾರಂಭವಾದ 2ನೇ ವರ್ಷದಲ್ಲಿ 40 ವಿದ್ಯಾರ್ಥಿಗಳು, 3ನೇ ವರ್ಷದಲ್ಲಿ 35 ವಿದ್ಯಾರ್ಥಿಗಳು ಸೇರಿ ಒಟ್ಟು 75 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಉನ್ನತ ಶಿಕ್ಷಣ ಇಲಾಖೆಯಿಂದ ಬಂದಂತಹ ರದ್ದು ಆದೇಶದಿಂದ 75 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಈಗಾಗಲೇ ಪ್ರಸ್ತುತ ಶೈಕ್ಷಣಿಕ ಸಾಲಿನ ಕೋರ್ಸ್‍ನ ಪ್ರವೇಶ ಪರೀಕ್ಷೆಯೂ ನಡೆದಿದೆ. ಪ್ರವೇಶಕ್ಕಾಗಿ ಹಲವು ವಿದ್ಯಾರ್ಥಿಗಳಿಂದ ಲಕ್ಷಾಂತ ಹಣ ಸಹ ಪಡೆಯಲಾಗಿದೆ.

 

ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಖಿಲಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಎಂಬಿಎ ಕೋರ್ಸ್‍ನ್ನು ಈ ಕಾಲೇಜಿನಲ್ಲಿ ರದ್ದು ಮಾಡುವಂತೆ ನೋಟಿಸ್ ನೀಡಿದೆ. ಆದ್ದರಿಂದ ಪ್ರಸ್ತುತ ಕಾಂಗ್ರೆಸ್‍ನಲ್ಲಿ ಹಲವು ಕನಸುಗಳನ್ನು ಹೊತ್ತು ವ್ಯಾಸಂಗ ಮಾಡುತ್ತಿರುವ ಹಲವಾರು ವಿದ್ಯಾರ್ಥಿಗಳಭವಿಷ್ಯ ಅತಂತ್ರವಾಗಿದ್ದು, ಈ ದಿಸೆಯಲ್ಲಿ ಮೈಸೂರು ವಿಶ್ವವಿದ್ಯಾಲಯ ಹಾಗೂ ಯುವರಾಜ ಕಾಲೇಜು ಆಡಳಿತ ಮಂಡಳಿ ಎಂಬಿಎ ವಿದ್ಯಾರ್ಥಿಗಳ ಬಗ್ಗೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin