ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ 

Spread the love

yuva-congress
ಬೆಂಗಳೂರು,ಏ.24-ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೇ 9ರಿಂದ 13ರವರೆಗೆ ಮತದಾನ ನಡೆಯಲಿದ್ದು, ಅಂತಿಮವಾಗಿ 8 ಮಂದಿ ಕಣದಲ್ಲಿದ್ದು, ತೀವ್ರ ಸ್ಪರ್ಧೆ ಎದುರಾಗುವ ಲಕ್ಷಣ ಗೋಚರಿಸಿದೆ.ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಅವರಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾಸಕ ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ, ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರನ ಪುತ್ರ ಬಸವನಗೌಡ ಬಾದರ್ಲಿ, ಬೆಂಗಳೂರಿನ ಶಿವಕುಮಾರ್,ಉಮೇಶ್ ಬೋರೇಗೌಡ, ಅಮೃತ್, ಕೆಂಪರಾಜು ಹಾಗೂ ಚಿಕ್ಕಮಗಳೂರಿನ ಪುಷ್ಪಲತಾ ಅವರ ಹೆಸರನ್ನು ಅಧ್ಯಕ್ಷ ಸ್ಥಾನದ ಚುನಾವಣೆಗೆ ಯುವ ಕಾಂಗ್ರೆಸ್ ಚುನಾವಣೆ ಸಮಿತಿ ಅಂತಿಮಗೊಳಿಸಿದೆ.

ಇವರಲ್ಲಿ ಒಬ್ಬರು ಅಧ್ಯಕ್ಷರಾಗ ಲಿದ್ದು, ಸೋತ ನಾಲ್ವರು ಉಪಾಧ್ಯಕ್ಷರಾಗಲಿದ್ದಾರೆ. ಇದರಲ್ಲಿ ಒಂದು ಹುದ್ದೆ ಪರಿಶಿಷ್ಟರಿಗೆ, ಇನ್ನೊಂದು ಹುದ್ದೆ ಮಹಿಳೆಯರಿಗೆ ಮಿಸಲಿರುತ್ತದೆ. ಉಮೆಶï ಅವರಿಗೆ ಸಚಿವರಾದ ಕೃಷ್ಣ ಬೈರೇಗೌಡ, ಸಂತೋಷ್ ಲಾಡ್ ಹಾಗೂ ಮುಖಂಡ ಬಿ.ಎಲï. ಶಂಕರï ಬೆಂಬಲವಿದೆ ಎನ್ನಲಾಗಿದೆ.  ಹಾಲಿ ಅಧ್ಯಕ್ಷ ರಿಜಾನ್  ಅರ್ಷದ್ ಅವರು ಅಮೃತ್ ಪರವಾಗಿ ನಿಂತಿದ್ದಾರೆ, ಪ್ರಿಯಾಂಕ ಖರ್ಗೆ ಹಾಗೂ ಎಂ.ಆರ್.ಸೀತಾರಾಂ ಅವರು ಶಿವಕುಮಾರ್ ಪರವಾಗಿದ್ದರೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಕಾಂಗ್ರೆಸ್ ಮುಖಂಡರು ಪುಷ್ಪಲತಾ ಅವರನ್ನು ಕಣಕ್ಕಿಳಿಸಿದ್ದಾರೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲ ಪಡೆದು ಕೆಂಪರಾಜು ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ 55 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, 11 ಜನ ಈ ಹುದ್ದೆಗೆ ಆಯ್ಕೆಯಾಗಲಿದ್ದಾರೆ. ಇತರರು ಕಾರ್ಯದರ್ಶಿಗಳಾಗಿ ಉಳಿಯಲಿದ್ದಾರೆ.

ರಾಜಧಾನಿಯಲ್ಲೂ ಪೈಪೋಟಿ ಬೆಂಗಳೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಎಂ.ಆರ್.ಸೀತಾರಾಂ ಹಾಗೂ ಕಾಂಗ್ರೆಸ್ ಮುಖಂಡ ಬಿ.ಕೆ.ಶಿವರಾಂ ಅವರ ಪುತ್ರ-ಪುತ್ರಿಯರು ಚುನಾವಣೆ ಕಣದಲ್ಲಿ ಉಳಿದಿದ್ದಾರೆ. ಸೌಮ್ಯಾ ರೆಡ್ಡಿ, ರಕ್ಷಿತ್ ಶಿವರಾಂ ಹಾಗೂ ರಕ್ಷಾ ಸೀತಾರಾಂ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇನ್ನು ಹಾಸನದಲ್ಲಿ ಪಶುಸಂಗೋಪನಾ ಸಚಿವ ಎ.ಮಂಜು ಪುತ್ರ ಮಂಥರï ಗೌಡ ಅಂತಿಮ ಕಣದಲ್ಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin