ಯೆಮೆನ್ : 60 ಜನರಿದ್ದ ನೌಕೆ ಮುಳುಗಿ 8 ಮಂದಿ ಜಲಸಮಾಧಿ

Spread the love

60-Killed

ಸನ್ನಾ, ಡಿ.7-ನೌಕೆಯೊಂದು ಮುಳುಗಿ 8 ಮಂದಿ ಜಲಸಮಾಧಿಯಾಗಿರುವ ದುರಂತ ಅರಬ್ಬಿ ಸಮುದ್ರದಲ್ಲಿ ಸಂಭವಿ ಸಿದೆ. ಕಳೆದ ಐದು ದಿನಗಳಿಂದ ನೌಕೆ ನಾಪತ್ತೆಯಾಗಿದ್ದು, ಅದರಲ್ಲಿದ್ದ 8 ಪ್ರಯಾಣಿಕರು ನೀರು ಪಾಲಾಗಿದ್ದಾರೆ ಎಂದು ಯೆಮೆನ್ ಸರ್ಕಾರ ಹೇಳಿಕೆ ನೀಡಿದೆ.  ಯೆಮೆನ್‍ನಿಂದ ದಕ್ಷಿಣ ಹದ್ರಾಮ ವತ್ ಪ್ರಾಂತ್ಯಕ್ಕೆ ಈ ನೌಕೆ ತೆರಳುತ್ತಿತ್ತು. ಕರಾವಳಿ ಪ್ರದೇಶದ ಸೊಕೊಟ್ರಾ ದ್ವೀಪದಿಂದ ಸುಮಾರು 40 ಕಿ.ಮೀ. ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ನೌಕೆ ಕಳೆದ ಐದು ದಿನಗಳಿಂದ ಕಣ್ಮರೆಯಾಗಿದೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಇದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರಂತ ಕುರಿತು ಹೇಳಿಕೆ ನೀಡಿರುವ ಹದಾಮವತ್ ಗವರ್ನರ್ ಅಹಮದ್ ಬೆನ್-ಬ್ರೀಕ್ ಇಬ್ಬರನ್ನು ರಕ್ಷಿಸಲಾಗಿದೆ. ನೌಕೆಯಲ್ಲಿದ್ದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಪ್ರಾಂತ್ಯದಲ್ಲಿ ಹೌತಿ ಬಂಡುಕೋರರ ವಿರುದ್ಧ ಹೋರಾಡು ತ್ತಿರುವ ಸೌದಿ ನೇತೃತ್ವದ ಮಿತ್ರಪಡೆಗಳು ಶೋಧ ಕಾರ್ಯದಲ್ಲಿ ನೆರವಾಗುವಂತೆ ಯಮೆನ್ ಸರ್ಕಾರ ಮನವಿ ಮಾಡಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin