ಯೋಜನೆಗಳ ಸದುಪಯೋಗ : ಮೆಚ್ಚುಗೆ

Spread the love

channapatana2

ಚನ್ನಪಟ್ಟಣ, ಸೆ.22- ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ರೈತರು ಯೋಜನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ವಿ.ಮರೀಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.ಟಿಎಪಿಸಿಎಂಎಸ್ ಆವರಣದಲ್ಲಿ ಹಮ್ಮಿಕೊಂಡಿದ್ದ 2015-16ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಘದಲ್ಲಿ 7.536 ಸದಸ್ಯರಿದ್ದು, ಈ ಹಿಂದೆ 1008 ವರ್ಷಗಳ ಹಿಂದೆ ಈ ಸಂಸ್ಥೆ ಸೂಪರ್ ಸೀಡ್‍ಗೆ ಒಳಪಟ್ಟಿತ್ತು. ಆದರೆ ಈಗ ಅದನ್ನು ನಿಧಾನವಾಗಿ ಜೀವಂತಗೊಳಿಸಲಾಗುತ್ತಿದೆ ಎಂದರು.

ಸಂಘವು ಹೊಸ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಿದ್ದು, ಹೊಸ ಕಟ್ಟಡದಲ್ಲಿ 2 ಮಳಿಗೆಗಳನ್ನು ಬಾಡಿಗೆ ರೂಪದಲ್ಲಿ ನೀಡುವ ತೀರ್ಮಾನವನ್ನು ಕೈಗೊಂಡಿದ್ದೇವೆ. ಎಲ್ಲರೂ ಸಹಕರಿಸಿ ಸಮಘದ ಏಳಿಗೆಗಾಗಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.ಉಪಾಧ್ಯಕ್ಷ ರಾಜು, ನಿರ್ದೇಶಕರಾದ ಎ.ಸಿ.ಪುಟ್ಟಸ್ವಾಮಿ, ಡಿ.ಕೆ.ಕಾಂತರಾಜು, ಬಿ.ಈ.ನಂದೀಶ್‍ಕುಮಾರ್, ಆನಂದಬೀರಮ್ಮ, ಎಸ್.ಲಿಂಗರಾಜೇಗೌಡ, ಪಿ.ಪುಟ್ಟಸ್ವಾಮಿಗೌಡ, ಪದ್ಮಮ್ಮ, ಚಿಕ್ಕತಾಯಮ್ಮ, ಲಕ್ಷ್ಮಮ್ಮ, ಸರ್ಕಾರದ ನಾಮ ನಿರ್ದೇಶಕ ಬಿ.ಟಿ.ಶಿವಮಲ್ಲೇಗೌಡ, ಕಾಸ್ಕರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಭೈರೇಗೌಡ ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin