ಯೋಧನ ಶಿರಚ್ಛೇದ ಮಾಡಿದ ಪಾಕ್ ವಿರುದ್ಧ ಪ್ರತಿಕಾರಕ್ಕಿಳಿದ ಭಾರತ : ಗಡಿಯಲ್ಲಿ ಉದ್ವಿಗ್ನ ಸ್ಥಿತಿ

Firing-02

ಜಮ್ಮು/ಶ್ರೀನಗರ, ನ.23-ಕಾಶ್ಮೀರದ ಮಚ್ಚಲ್ ಸೆಕ್ಟರ್‍ನಲ್ಲಿ ಮೂವರು ಯೋಧರನ್ನು ಹತ್ಯೆಗೈದು ಸೈನಿಕನೊಬ್ಬನ ಅಂಗಚ್ಛೇದನ ಮಾಡಿ ಪೈಶಾಚಿಕ ಕೃತ್ಯ ಎಸಗಿರುವ ಪಾಕಿಸ್ತಾನಿ ಪಡೆಗಳಿಗೆ ತಕ್ಕ ಪಾಠ ಕಲಿಸಲು ಭಾರತೀಯ ಸೇನೆ ಕಾರ್ಯಾಚರಣೆಗೆ ಇಳಿದಿರುವುದರಿಂದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯೊಂದಿಗೆ ಸಮರ ಸದೃಶ ವಾತಾವರಣ ನೆಲೆಗೊಂಡಿದೆ.  ಇದೇ ವೇಳೆ, ಮತ್ತೆ ಉದ್ಧಟತನ ತೋರಿರುವ ಪಾಕಿಸ್ತಾನ ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್‍ನಲ್ಲಿ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ದಾಳಿ ಮುಂದುವರಿಸಿದ್ದು, ಭಾರತೀಯ ಯೋಧರೂ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ.

ಪೂಂಚ್, ರಜೌರಿ, ಖೇಲ್, ಮಚ್ಚಿಲ್ ವಲಯಗಳಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪ್ರತಿದಾಳಿಯನ್ನು ತೀವ್ರಗೊಳಿಸಿರುವ ಭಾರತೀಯ ಯೋಧರು, ಪಾಕಿಸ್ತಾನದ ರೇಂಜರ್‍ಗಳ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ಗುಂಡಿನ ಮಳೆಗರೆಯುತ್ತಿವೆ.  ಗಡಿಯಲ್ಲಿ ನಡೆಸಿರುವ ದುಷ್ಕøತ್ಯಕ್ಕೆ ಪಾಕಿಸ್ತಾನ ಬೆಲೆ ತೆರಲೇಬೇಕು. ತಾನು ಕಠಿಣ ಪ್ರತೀಕಾರ ತೀರಿಕೊಳ್ಳುವುದಾಗಿ ಭಾರತೀಯ ಸೇನೆ ಈಗಾಗಲೇ ಶಪಥ ಮಾಡಿದ್ದು, ಬೆಳಿಗ್ಗೆಯಿಂದಲೇ ವೈರಿ ಪಾಳೆಯ ವೈರಿ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿರುವುದರಿಂದ ಪಾಕ್ ಸೈನಿಕರು ಬೆಚ್ಚಿ ಬಿದ್ದಿದ್ದಾರೆ.

ಈ ಹಿಂದೆ ಭಾರತದ ವೀರಯೋಧನ ಶಿರಚ್ಛೇದ ಮಾಡಿ ಮೆರೆದಿದ್ದ ಪಾಕಿಸ್ತಾನಿ ಯೋಧರಿಗೆ ಬಿಎಸ್‍ಎಫ್ ಬಿಸಿ ಮುಟ್ಟಿಸಿತ್ತು. ಈ ದಾಳಿಯಲ್ಲಿ ಪಾಕ್ ಪಾಳೆಯದಲ್ಲಿ ಸಾವು-ನೋವಿನೊಂದಿಗೆ ಸೇನಾ ನೆಲೆಗಳು ಧ್ವಂಸಗೊಂಡು ಅಪಾರ ಹಾನಿ ಉಂಟಾಗಿತ್ತು. ಭಾರತೀಯ ಸೇನೆ ಮತ್ತೆ ಘರ್ಜಿಸಿರುವುದರಿಂದ ಪಾಕಿಸ್ತಾನ ಪಡೆಗಳು ಮತ್ತೊಮ್ಮೆ ಹೆದರಿ ಕಂಗಾಲಾಗಿವೆ.
ಭಾರತದಿಂದ ಎದುರಾಗಬಹುದಾದ ಎಲ್ಲ ರೀತಿಯ ದಾಳಿಯನ್ನು ಎದುರಿಸಲು ಸಜ್ಜಾಗಿರುವಂತೆ ಗಡಿ ಭಾಗದ ಪಾಕ್ ರೇಂಜರ್‍ಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಗಡಿಯಲ್ಲಿ ಮತ್ತೊಮ್ಮೆ ದೀಪಾವಳಿ ಆಚರಿಸಲು ಸಜ್ಜಾ ಗಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದಿರುವ ಯೋಧರ ಭೀಕರ ಹತ್ಯೆಯ ಎರಡನೇ ಘಟನೆ ಇದಾಗಿದೆ. ಸೆಪ್ಟೆಂಬರ್ 29ರಂದು ಪಾಕ್ ಸೇನೆಯ ಕುಮ್ಮಕ್ಕಿನಿಂದ ಒಳನುಸುಳಿದ್ದ ಉಗ್ರರು ಕುಪ್ವಾರ ಜಿಲ್ಲೆಯಲ್ಲಿ ಯೋಧ ಮನ್‍ದೀಪ್ ಸಿಂಗ್‍ರನ್ನು ಹತ್ಯೆಗೈದು ದೇಹ ತುಂಡರಿಸಿದ್ದರು.  ಕಾಶ್ಮೀರ ವಿವಾದ ಮುಂದಿಟ್ಟುಕೊಂಡು ವಿಧ್ವಂಸಕ ಕೃತ್ಯ ನಡೆಸುತ್ತಿರುವ ಉಗ್ರಗಾಮಿಗಳಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಸೇನೆಯ ಮೂಲಕವೂ ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ.

ಮಾತುಕತೆಗೆ ವಿಘ್ನ :

ಗಡಿ ಭಾಗದಲ್ಲಿ ಪಾಕಿ ಸೈನಿಕರ ಕದನ ವಿರಾಮ ಉಲ್ಲಂಘನೆ ಮತ್ತು ಉಗ್ರಗಾಮಿಗಳ ನೀಚ ದುಷ್ಕøತ್ಯಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ದೇಶಿತ ಚರ್ಚೆಗೆ ಭಂಗವುಂಟಾಗಲಿದೆ. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಮುಂದಿನ ವಾರ ಸಮಾವೇಶವೊಂದರಲ್ಲಿ ಭಾಗವಹಿಸಲು ಅಮೃತಸರಕ್ಕೆ ಬರಲಿದ್ದು, ಎರಡು ದೇಶಗಳ ನಡುವೆ ನಿಗದಿಯಾಗಬಹುದಾಗಿದ್ದ ಮಾತುಕತೆ ಬಹುತೇಕ ಮುರಿದು ಬಿದ್ದಿದೆ.

<  ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : ಪರಿಚಯಿಸುತ್ತಿದ್ದೇವೆ Eesanje News 24/7 ನ್ಯೂಸ್ ಆ್ಯಪ್ –  Click Here to Download >

Sri Raghav

Admin