ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಿ

13

ನರೇಗಲ್ಲ,ಫೆ.14- ನಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದು ಮಹಾದಾನವಾಗಿದ್ದು ಒಂದು ಹನಿ ರಕ್ತ ಅತ್ಯಮೂಲ್ಯ ಜೀವದ ಉಳವಿಗೆ ನೆರವಾಗಲಿದೆ ಎಂದು ಜಿಲ್ಲಾ ಐಎಂಎ ಅಧ್ಯಕ್ಷ ಡಾ. ಆರ್.ಟಿ. ಪವಾಡಶೆಟ್ಟರ್ ಹೇಳಿದರು.ಶ್ರೀ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ನರೇಗಲ್ಲದಲ್ಲಿ ರೆಡ್‍ಕ್ರಾಸ್ ಹಾಗೂ ರೋವರ್ಸ್ ಮತ್ತು ರೆಂಜರ್ಸ್ ಹಾಗೂ ಭಾವಸಾರ ವಿಸಿನ್ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ರಕ್ತ ಗುಂಪು ಪರೀಕ್ಷೆ ಮತ್ತು ರಕ್ತದಾನ ಶಿಬಿರ ಆಯೋಜಿಸಿತು. ಈ ಶಿಬಿರವನ್ನು ಪಟ್ಟಣ ಪಂಚಾಯತ ಅಧ್ಯಕ್ಷ ಸುನೀಲ ಬಸವರೆಡ್ಡರ ರಕ್ತದಾನ ಮಾಡುವುದರ ಮೂಲಕ ಚಾಲನೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಐಎಂಎ ಅಧ್ಯಕ್ಷ ಡಾ. ಆರ್.ಟಿ ಪವಾಡಶೆಟ್ಟರ್ ಮಾತನಾಡಿ ಇಂದಿನ ದಿನಮಾನಗಳಲ್ಲಿ ಹೆಣ್ಣುಮಕ್ಕಳಿಗೆ ಹೆರಿಗೆ ಸಮಯದಲ್ಲಿ ಮತ್ತು ಅಪಘಾತಕ್ಕೀಡಾದ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ.

ಆಗ ರಕ್ತ ನೀಡುವವರು ನಿಜಕ್ಕೂ ದೇವರಾಗಿ ಕಾಣುತ್ತಾರೆ. ಏಕೆಂದರೆ ಇಂದಿಗೂ ಕೃತಕ ರಕ್ತ ಮಾಡುವುದು ಸಾಧ್ಯವಾಗಿಲ್ಲ. ಕಾರಣ ಮಾನವ ಸಂಪನ್ಮೂಲವನ್ನು ಅವಲಂಭಿಸಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಅರುಣ ಕಾಮತ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಪ್ರಭುಸ್ವಾಮಿ ಅರವಟಗಿಮಠ, ಕಾಲೇಜಿನ ಸಿಬ್ಬಂದಿಗಳಾದ ಕೆ.ಆರ್. ಪಾಟೀಲ, ದೈಹಿಕ ಶಿಕ್ಷಣ ಭೋದಕರು ಘನಶ್ಯಾಮ ಜೋಷಿ, ಲತಾ ಎನ್. ಕಿಲ್ಲೇದಾರ, ಕೆ.ಎಚ್. ಅಂಜನಮೂರ್ತಿ ಗ್ರಂಥಪಾಲಕರು, ಲಕ್ಷ್ಮೀ ನಾಗರಾಳ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin