ರಕ್ತದಾನ ವ್ಯಕ್ತಿಗೆ ಜೀವದಾನ ಮಾಡಿದಂತೆ
ಬೆಳಗಾವಿ,ಫೆ.25- ರಕ್ತದಾನ ಮಾಡುವ ಮೂಲಕ ಅಗತ್ಯವಿರುವ ವ್ಯಕ್ತಿಗೆ ರಕ್ತ ನೀಡಿ ಪ್ರಾಣ ರಕ್ಷಣೆ ಮಾಡುವುದು ಮಹಾನ್ ಕಾರ್ಯವಾಗಿದೆ. ಸಧೃಡವಂತರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಕೆಎಲ್ಇ ಆಸ್ಪತ್ರೆಯ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ. ಅಶ್ವಿನಿ ಹೇಳಿದರು.ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಜಿನಾ ಸ್ಪೇಷಲ್ ಸ್ಟೀಲ್ ವಕ್ರ್ಸ ಕಾರ್ಖಾನೆಯಲ್ಲಿ ಜಿನಾಬಕುಲ ಫೋರ್ಜ್ , ಜಿನಾ ಸ್ಪೇಷಲ್ ಸ್ಟೀಲ್ ವಕ್ರ್ಸ, ಯನ್ಕೇಸ್, ಎಂಜನಿಯರಿಂಗ್ ಯುನಿಟ 3ಹಾಗೂ ಜಿಡಿ ಜೆಸ್ಟೀಲ್ ಎಂಜನಿಯರಿಂಗ್ ಸಂಸ್ಥೆಯ ಸಿಬಂಧಿ ಮತ್ತು ಕಾರ್ಮಿಕರಿಗಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.ರಕ್ತದಾನ ಮಾಡುವುದರಿಂದ ಬೇರೊಬ್ಬ ವ್ಯಕ್ತಿಗೆ ಜೀವದಾನ ಮಾಡಿದಂತಾಗುತ್ತದೆ. ಪ್ರತಿಯೊಬ್ಬ ಮನುಷ್ಯ ನಿಯಮಿತವಾಗಿ ರಕ್ತದಾನ ಮಾಡಿದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಮೂರು ವ್ಯಕ್ತಿಗಳಿಗೆ ಜೀವದಾನ ಮಾಡಿದಂತಾಗುತ್ತದೆ. ದುಶ್ಚಟಗಳಿಂದ ದೂರವಿದ್ದು, ಶರೀರದಲ್ಲಿ ಪರಿಶುದ್ದ ರಕ್ತವನ್ನು ಹೊಂದುವ ಮೂಲಕ ಅಗತ್ಯ ವ್ಯಕ್ತಿಗಳಿಗೆ ರಕ್ತದಾನ ಮಾಡಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಜಿನಾ ಸ್ಪೇಷಲ್ ಸ್ಟೀಲ್ ವಕ್ರ್ಸ, ಜಿನಾಬಕುಲ ಫೋರ್ಜ್ , ಯನ್ಕೇಸ್ ಎಂಜನಿಯರಿಂಗ್ ಯುನಿಟ 3ಹಾಗೂ ಜಿಡಿಜೆ ಎಂಜನಿಯರಿಂಗ್ ಈ ನಾಲ್ಕು ಸಂಸ್ಥೆಯ ಸಿಬ್ಬಂದಿ ಹಾಗೂ ಕಾರ್ಮಿಕರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಜಿನಾಬಕುಲ ಫೋರ್ಜ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಜಿನಗೌಡ, ಕಿರಣಜಿನಗೌಡ, ಶರದ ಬಾಳಿಕಾಯಿ, ಸಂಜಯ ಭಿಂಗೆ, ಸಂತೋಷ ಕಲಗೇರಿ, ಬಾಹುಬಲಿ ಚೌಗುಲೆ, ಕೆಎಲ್ಇ ಆಸ್ಪತ್ರೆಯ ವೈದ್ಯಡಾ. ಬಸವರಾಜ, ಡಾ. ಅರುಣ ಮೊದಲಾದವರು ಉಪಸ್ಥಿತರಿದ್ದರು.
< Eesanje News 24/7 ನ್ಯೂಸ್ ಆ್ಯಪ್ >