ರಕ್ಷಿತಾರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಾಡು ಹಂದಿ ಬೇಟೆ : ಐವರ ಬಂಧನ

beluru-2

ಬೇಲೂರು, ಮಾ.23-ತಾಲೂಕಿನ ಐದಳ್ಳಿ ಕಾವಲಿನ ರಕ್ಷಿತಾರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಾಡು ಹಂದಿಯನ್ನು ಬೇಟೆಯಾಡುತ್ತಿದ್ದ ಐದು ಮಂದಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ. ಅರಸೀಕೆರೆ ತಾಲೂಕಿನ ಕಮಲಾಪುರ ಗ್ರಾಮದ ನಾಗರಾಜು, ಮೂಡಿಗೆರೆ ತಾಲೂಕಿನ ಹೆಸಗೋಡು ಗ್ರಾಮದ ಚನ್ನಕೇಶವ, ಪಡದೂರು ಗ್ರಾಮದ ಪವನ್, ಹಾಗೂ ರಮೇಶ್ ಮತ್ತು ಚಿಕ್ಕಮಗಳೂರು ತಾಲೂಕಿನ ಚಿಕ್ಕಳ್ಳಿ ಗ್ರಾಮದ ಲೋಹಿತ್ ಬಂಧಿತ ಆರೋಪಿಗಳು.ಅರಣ್ಯಾಧಿಕಾರಿ ಗಿರೀಶ್ ನೇತೃತ್ವದ ತಂಡ ಬಂಧಿಸಿ ಈ ಆರೋಪಿಗಳಿಂದ 4 ಜೊತೆ ನಳಿಕೆ ಬಂದೂಕು, 1 ಮಹೀಂದ್ರ ಪಿಕಪ್ ಹಾಗೂ 4 ಮಚ್ಚು, 4 ಕುಡುಗೋಲು ಹಾಗೂ ಕಾಡು ಹಂದಿಯ ಕಳೆ ಬರವನ್ನು ವಶಕ್ಕೆ ಪಡೆದಿದ್ದಾರೆ.ಕಾರ್ಯಾಚರಣೆಯಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸಹ ಅರಣ್ಯಾಧಿಕಾರಿ ಹರೀಶ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಣ್ಣ ನಂಜಪ್ಪ, ಅರಣ್ಯ ರಕ್ಷಕರಾದ ನಿಂಗೇಗೌಡ, ಸಂತೋಷ, ಧನಂಜಯ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin