ರನ್ ವೇನಲ್ಲಿ ಚಿರತೆ ಕಾಟದಿಂದಾಗಿ ಕೆಲಕಾಲ ಏರ್‍ಪೋರ್ಟ್ ಬಂದ್

Runway

ಕಠ್ಮಂಡು,ಏ.3- ವಿಮಾನಗಳ ಹಾರಾಟಕ್ಕೆ ಪಕ್ಷಿಗಳಿಂದ ಅಡ್ಡಿ ಉಂಟಾಗುವುದು ಸಾಮಾನ್ಯ. ಆದರೆ ಹಿಮಾಲಯ ರಾಷ್ಟ್ರ ನೇಪಾಳದ ರಾಜಧಾನಿಯಲ್ಲಿ ಚಿರತೆಯೊಂದರಿಂದ ಏರ್‍ಪೋರ್ಟ್ ಕೆಲಕಾಲ ಬಂದ್ ಆದ ಪ್ರಸಂಗ ಇಂದು ಬೆಳಗ್ಗೆ ನಡೆದಿದೆ. ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುದ್ದ ಏರ್ ಸಂಸ್ಥೆಯ ವಿಮಾನವೊಂದು ರನ್‍ವೇನಲ್ಲಿ ಇಳಿಯುತ್ತಿದ್ದಾಗ ಚಿರತೆಯೊಂದು ಸ್ವಚ್ಚಂದವಾಗಿ ಓಡಾಡುತ್ತಿದದ್ದು ಕಂಡುಬಂದು ಪೈಲೆಟ್ ಗಾಬರಿಯಾದರು.   ತಕ್ಷಣ ವಿಮಾನ ನಿಯಂತ್ರಣ ಕೊಠಡಿಗೆ ಸುದ್ದಿ ಮುಟ್ಟಿಸಿದರು. ಅಲ್ಲಿಂದ ತೆರಳಿದ ಚಿರತೆ ಮತ್ತೆ ರನ್‍ವೇನಲ್ಲಿ ಕಾಣಿಸಿಕೊಂಡ ಕಾರಣ ಕೆಲಕಾಲ ಏರ್‍ಪೋರ್ಟ್‍ನ್ನು ಬಂದ್ ಮಾಡಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin