ರವಿಚಂದ್ರನ್ ಅಶ್ವಿನ್ ಮತ್ತೊಂದು ದಾಖಲೆ

Ashwin-01

ಹೈದ್ರಾಬಾದ್, ಫೆ.12- ಕಳೆದ ವರ್ಷ ದಾಖಲೆಗಳ ಸುರಿಮಳೆಯನ್ನೇ ಸುರಿಸಿದ್ದ ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮತ್ತೊಂದು ಮೈಲಿಗಲ್ಲನ್ನು ನಿರ್ಮಿಸಿದ್ದಾರೆ.
ಕಳೆದ ನ್ಯೂಜಿಲೆಂಡ್ ಸರಣಿಯಲ್ಲಿ ಅತಿ ವೇಗದ 200 ವಿಕೆಟ್ ಕಬಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದ ಅಶ್ವಿನ್ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕಮೇವ ಟೆಸ್ಟ್ ವೇಳೆ ಮು.ರಹೀಮ್‍ರವರು ವಿಕೆಟ್ ಕೀಪರ್ ವೃದ್ಧಿಮಾನ್ ಶಾಗೆ ಕ್ಯಾಚ್ ನೀಡುತ್ತಿದ್ದಂತೆ ಅಶ್ವಿನ್ ನೂತನ ದಾಖಲೆಯನ್ನು ನಿರ್ಮಿಸಿದ್ದರು.  ರವಿಚಂದ್ರನ್ ಅಶ್ವಿನ್ ತಾನಾಡಿದ 45 ಟೆಸ್ಟ್ ಪಂದ್ಯಗಳಿಂದ 250 ವಿಕೆಟ್‍ಗಳನ್ನು ಕಬಳಿಸಿದ ವೇಗದ ಆಟಗಾರ ಎಂಬ ದಾಖಲೆ ನಿರ್ಮಿಸಿ ಕ್ರಿಕೆಟ್ ದಂತಕತೆ ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ (48 ಪಂದ್ಯ)ರ ದಾಖಲೆಯನ್ನು ಸರಿಗಟ್ಟಿದರು.
ಭಾರತ ತಂಡದ ತರಬೇತುದಾರ ಅನಿಲ್ ಕುಂಬ್ಳೆ ಅವರು 22 ಅಕ್ಟೋಬರ್ 1999ರಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆಯನ್ನು ಮಾಡಿದ್ದರು. ಆದರೆ ಅವರು ಈ ಸಾಧನೆ ಮಾಡಲು ತೆಗೆದುಕೊಂಡಿದ್ದು 55 ಪಂದ್ಯಗಳನ್ನು.

250 ವಿಕೆಟ್ ಪಡೆದ ಟಾಪ್ 10 ಆಟಗಾರರು:

ರವಿಚಂದ್ರನ್ ಅಶ್ವಿನ್ (ಭಾರತ, 45 ಪಂದ್ಯ), ಡೆನ್ನಿಸ್ ಲಿಲ್ಲಿ (ಆಸ್ಟ್ರೇಲಿಯಾ, 48 ಪಂದ್ಯ), ಡೇನ್ ಸ್ಟೇನ್ (ದಕ್ಷಿಣ ಆಫ್ರಿಕಾ, 49 ಪಂದ್ಯ), ಅಲನ್ ಡೋನಾಲ್ಡ್ (ದ.ಆಫ್ರಿಕಾ 50 ಪಂದ್ಯ), ವಾಕರ್ ಯುನಿಸ್ (ಪಾಕಿಸ್ತಾನ, 51 ಪಂದ್ಯ), ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ, 51 ಪಂದ್ಯ), ರಿಚರ್ಡ್ ಹ್ಯಾಡ್ಲಿ (ನ್ಯೂಜಿಲೆಂಡ್ , 53 ಪಂದ್ಯ), ಎಂ.ಡಿ.ಮಾರ್ಷಲ್ (ವೆಸ್ಟ್‍ಇಂಡೀಸ್ , 53 ಪಂದ್ಯ), ಇಯಾನ್ ಬಾಥಮ್ ( ಇಂಗ್ಲೆಂಡ್, 55 ಪಂದ್ಯ), ಇಮ್ರಾನ್‍ಖಾನ್ (ಪಾಕಿಸ್ತಾನ, 55 ಪಂದ್ಯ)

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin