ರವೀಂದ್ರ ಕಲಾಕ್ಷೇತ್ರದಲ್ಲಿ ಇಂದಿನಿಂದ ಡಾ.ರಾಜ್‍ಕುಮಾರ್ ರಾಷ್ಟ್ರೀಯ ಉತ್ಸವ

Rajkumnar-0

ಬೆಂಗಳೂರು,ಡಿ.2-ಡಾ.ರಾಜ್‍ಕುಮಾರ್ ರಾಷ್ಟ್ರೀಯ ಉತ್ಸವ ಹಾಗೂ ಡಾ.ರಾಜ್‍ಕುಮಾರ್ ಸಮಗ್ರ ಚರಿತ್ರೆ ಮಹಾಯಾನದ ಸಮಾರೋಪ ಸಮಾರಂಭ ಇಂದಿನಿಂದ ಡಿಸೆಂಬರ್ 4ರವರೆಗೆ ಮೂರು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಮೂರು ದಿನಗಳ ಕಾಲ ರಾಜ್ ಪಾತ್ರಗಳ ರಂಗಾವತರಣ, ಕೃತಿ ಅವಲೋಕನ, ವಿಚಾರ ಸಂಕಿರಣ, ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ, ಸಂಗೀತ ಸಂಭ್ರಮವನ್ನು ಡಾ.ರಾಜ್‍ಕುಮಾರ್ ರಾಷ್ಟ್ರೀಯ ಉತ್ಸವ ಸಂಘಟನಾ ಸಮಿತಿ ಆಯೋಜಿಸಿದೆ.  ಇಂದು ಸಂಜೆ 4 ಗಂಟೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸಲಿದ್ದು , ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಧ್ಯಕ್ಷತೆ ವಹಿಸುವರು. ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು , ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಡಾ.ಅಂಬರೀಶ್ ಮತ್ತಿತರರು ಪಾಲ್ಗೊಳ್ಳುವರು.

ಇದೇ ವೇಳೆ ಛಾಯಾಚಿತ್ರ ಪ್ರದರ್ಶನವನ್ನು ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ಉದ್ಘಾಟಿಸುವರು. ಡಾ.ರಾಜ್‍ಕುಮಾರ್ ಸಮಗ್ರ ಚರಿತೆಯ ಇತಿಹಾಸ ಕುರಿತಂತೆ ಸಾಕ್ಷ್ಯ ಚಿತ್ರವೊಂದು ಪ್ರದರ್ಶನಗೊಳ್ಳಲಿದ್ದು , ಚಲನಚಿತ್ರ ನಿರ್ದೇಶಕ ಚಿ.ದತ್ತಾರಾಜು, ಹೋಟೆಲ್ ನವಯುಗದ ಕೆ.ಮೋಹನ್ ರಾವ್, ಶಿಲ್ಪ ಕಲಾವಿದ ಬಿ.ಸಿ.ಶಿವಕುಮಾರ್, ನರಸಿಂಹಮೂರ್ತಿ ಎಂಬ ಅಪರೂಪದ ಅಭಿಮಾನಿ ದೇವರುಗಳಿಗೆ ಗೌರವಾರ್ಪಣೆ.  ಡ್ರಾಮ ಜೂನಿಯರ್ಸ್ ತಂಡದಿಂದ ಡಾ.ರಾಜ್ ಸ್ಮರಣೀಯ ಪಾತ್ರಗಳ ಅಭಿನಯ ಕಾರ್ಯಕ್ರಮ ನೆರವೇರಲಿದೆ.

ನಾಳೆ ಬೆಳಗ್ಗೆ 10.30ಕ್ಕೆ ರಾಜ್‍ಕುಮಾರ್ ಕುರಿತ ವಿಚಾರ ಸಂಕಿರಣದಲ್ಲಿ ಎನ್.ವಿದ್ಯಾಶಂಕರ್, ಮನುಚಕ್ರವರ್ತಿ, ರಾಜೇಂದ್ರ ಚನ್ನಿ , ಪ್ರೊ.ಚಂದನ್‍ಗೌಡ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ನಾ ಕಂಡ ರಾಜ್‍ಕುಮಾರ್ ವಿಷಯ ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ವಹಿಸಲಿದ್ದು , ನಟಿ ರೂಪದೇವಿ, ಕಲಾವಿದ ಪ್ರಕಾಶ್ ರೈ, ನಿರ್ದೇಶಕ ಪಿ.ಶೇಷಾದ್ರಿ, ಹಾಸ್ಯ ಚಕ್ರವರ್ತಿ ಗಂಗಾವತಿ ಪ್ರಾಣೇಶ್ ವಿಷಯ ಮಂಡಿಸಲಿದ್ದಾರೆ.  ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಆದಿವಾನಿ ಲಕ್ಷ್ಮಿದೇವಿ ಅವರನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಉಮಾಶ್ರೀ ಗೌರವಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಮಧುಬಂಗಾರಪ್ಪ ಭಾಗವಹಿಸುವರು.

ಡಿ.4ರಂದು ಬೆಳಗ್ಗೆ 10.30ಕ್ಕೆ ಕನ್ನಡ ನಾಡುನುಡಿಯ ಅಸ್ಮಿತೆ:ಡಾ.ರಾಜ್‍ಕುಮಾರ್ ಎಂಬ ವಿಷಯವಾಗಿ ನಡೆಯುವ ಗೋಷ್ಟಿಯಲ್ಲಿ ಇತಿಹಾಸ ತಜ್ಞ ಪ್ರೊ.ಷ.ಶೆಟ್ಟರ್ ಅಧ್ಯಕ್ಷತೆ ವಹಿಸಲಿದ್ದು , ಪ್ರೊ.ಸಿ.ಎನ್.ರಾಮಚಂದ್ರನ್, ಡಾ.ಎಚ್.ಎಸ್.ರಾಘವೇಂದ್ರರಾವ್, ಪ್ರೊ.ಆರ್.ಕೆ.ಹುಡಗಿ ವಿಷಯ ಮಂಡಿಸುವರು.  ಮಧ್ಯಾಹ್ನ 2.30ಕ್ಕೆ ಡಾ.ರಾಜ್‍ಕುಮಾರ್ ಸಮಗ್ರ ಚರಿತ್ರೆ-ಕೃತಿ ಅವಲೋಕನದ ಅಧ್ಯಕ್ಷತೆಯನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ವಹಿಸಲಿದ್ದು , ಕತೆಗಾರ ಕೆ.ಸತ್ಯನಾರಾಯಣ, ಡಾ.ಮೊಗಳ್ಳಿ ಗಣೇಶ್, ಡಾ.ಶ್ರೀಧರ್ ವಿಷಯ ಮಂಡಿಸುವರು.
ಸಂಜೆ 5 ಗಂಟೆಗೆ ಡಾ.ರಾಜ್‍ಕುಮಾರ್ ಸಮಗ್ರ ಚರಿತ್ರೆ ಮಹಾಯಾನದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಡಾ.ಸಿದ್ದಲಿಂಗಯ್ಯ ವಹಿಸಲಿದ್ದು , ಡಾ.ಶಿವರಾಜ್‍ಕುಮಾರ್, ಗೀತಾ ಶಿವರಾಜ್‍ಕುಮಾರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕನ್ನಡ ಸಂಸ್ಕøತಿ ಇಲಾಖೆ ನಿರ್ದೇಶಕ ಕೆ.ದಯಾನಂದ್ ಭಾಗವಹಿಸಲಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin