ರಸ್ತೆ ಒತ್ತುವರಿ : 20 ಮನೆಗಳ ಕಾಂಪೌಂಡ್ ತೆರವು

Spread the love

m-ysore1

ಮೈಸೂರು, ಸೆ.27- ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ 20ಕ್ಕೂ ಹೆಚ್ಚು ಮನೆಗಳ ಕಾಂಪೌಂಡನ್ನು ಇಂದು ಬೆಳಗ್ಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.ಅಶೋಕಪುರಂನ ವಾರ್ಡ್ ನಂ.9ರ 13ನೆ ಕ್ರಾಸ್‍ನಲ್ಲಿ ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ 20ಕ್ಕೂ ಹೆಚ್ಚು ಮನೆಗಳಿಗೆ ಪಾಲಿಕೆ ಅಧಿಕಾರಿಗಳು ನೋಟೀಸ್ ನೀಡಿದ್ದರು. ಆದರೆ ಅದನ್ನು ಲೆಕ್ಕಿಸದೆ ಇದ್ದುದರಿಂದ ಇಂದು ಬೆಳ್ಳಂ ಬೆಳಗ್ಗೆ ಪಾಲಿಕೆ ಅಧಿಕಾರಿಗಳು ಜೆಸಿಬಿಗಳಿಂದ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿದ್ದಾರೆ.

 

maralu23
ಇಂದಿನಿಂದ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದು, ನಗರದ ಹಲವು ಕಡೆ ಒತ್ತುವರಿಯಾಗಿ ನಿರ್ಮಾಣ ಮಾಡಿರುವ ಮನೆಗಳ ಕಾಂಪೌಂಡ್ ಮೆಟ್ಟಿಲುಗಳನ್ನು ತೆರವುಗೊಳಿಸಲು ನೋಟೀಸ್ ನೀಡುತ್ತೇವೆ. ಅವರು ತೆರವುಗೊಳಿಸದೆ ಇದ್ದರೆ ಪಾಲಿಕೆ ಮುಖಾಂತರವೇ ಒತ್ತುವರಿ ಮಾಡಿಕೊಳ್ಳುವುದಾಗಿ ಅಧಿಕಾರಿಗಳು ಹೇಳಿದರು.ಒತ್ತುವರಿಯಿಂದಾಗಿ ರಸ್ತೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ ಮಾಡಲು ಆಗುತ್ತಿರಲಿಲ್ಲ. ಅಲ್ಲದೆ ಮಳೆ ಬಂದಾಗ ರಸ್ತೆಯ ನೀರು ಚರಂಡಿಗೆ ಹೋಗದೆ ಅಲ್ಲೇ ನಿಂತು ತೊಂದರೆಯಾಗುತ್ತಿತ್ತು. ಆದ್ದರಿಂದ ತೆರವುಗೊಳಿಸಿದ್ದೇವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin